ಮಂಗಳೂರು, ಆ 19(DaijiworldNews/HR): ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣದಲ್ಲಿ ಬುಧವಾರ ಬಂಧಿಸಲಾಗಿದ್ದ ಆರೋಪಿ ಹರ್ಷಿತ್ಗೆ ಜೆಎಂಎಫ್ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಹರ್ಷಿತ್ ಮೇಲೆ ಫಾಝಿಲ್ ಅವರ ಕೊಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಆರೋಪಿಯನ್ನು ಆಗಸ್ಟ್ 17ರಂದು ಬಂಧಿಸಿದ್ದರು.
ಪೊಲೀಸರು ಗುರುವಾರ ಆರೋಪಿ ಹರ್ಷಿತನನ್ನು ಎರಡನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಸುರತ್ಕಲ್ ನ ಮಾರುಕಟ್ಟೆಯ ಮುಹಮ್ಮದ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಮತ್ತು ಕೃತ್ಯ ಎಸಗಲು ಕಾರು ನೀಡಿದ್ದ ಓರ್ವನನ್ನು ಬಂಧಿಸಿದ್ದರು.