ಸುಳ್ಯ, ಆ 17 (DaijiworldNews/SM): ಹಠ ಮಾಡುತ್ತಿದೆ ಎಂದು ಮಗುವಿಗೆ ತಾಯಿ ಬಿಸಿ ಸಟ್ಟುಗದಲ್ಲಿ ಬರೆ ಹಾಕಿದ ಘಟನೆ ಸುಳ್ಯದ ನಾವೂರಿನಲ್ಲಿ ನಡೆದಿದೆ.
ಹಟ ಮಾಡುತ್ತಿದೆ ಎನ್ನಲಾದ ನಾಲ್ಕು ವರ್ಷ ಪ್ರಾಯದ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ್ದಾರೆ. ತಾಯಿ ಕಾವ್ಯಶ್ರೀ ಎಂಬವಳಿಂದ ಕ್ರೂರಿ ಕೃತ್ಯ ನಡೆದಿದೆ. ಆರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆ ಭೇಟಿ ನೀಡಿದ್ದಾರೆ. ಮಗುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಿಡಿಪಿಒ ದಾಖಲಿಸಿದ್ದಾರೆ. ಗಂಭೀರ ಸುಟ್ಟ ಗಾಯಗೊಂಡ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.