ಪುತ್ತೂರು, ಆ 17 (DaijioworldNews/HR): 21 ವರ್ಷದ ಹಿಂದೆ ನಡೆದ ಕಾರು ಕಳವು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನನ್ನು ಸುರೇಶ್ ಪ್ರಭು ಎಮ್ದು ಗುರುತಿಸಲಾಗಿದೆ.
ಘಟನೆಯ ವಿವರ:
08 ಮಾರ್ಚ್ 2001 ರಂದು ಮಂಗಳೂರು ಹಂಪನಕಟ್ಟೆಯಿಂದ ಜಯಂತ ಎಂಬವರ ಬಾಡಿಗೆಗೆ ಟಾಟಾ ಸುಮೋ ಕಾರನ್ನು ಆರೋಪಿಗಳಾದ ಸುಧೀರ್ ಪ್ರಭು ,ಮತ್ತು ಬಿ.ಎಂ ಹನೀಫ್ ರವರುಗಳು ಬಾಡಿಗೆಗೆ ಪಡೆದು ಸಕಲೇಶ್ ಪುರ, ಹಾಸನ ಇತ್ಯಾದಿ ಕಡೆಗಳಲ್ಲಿ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿ ಮಾರ್ಚ್ 13ರಂದು ಬೆಳಿಗ್ಗಿನ ಜಾವ 3.00 ಗಂಟೆ ಸಮಯಕ್ಕೆ ಪುತ್ತೂರಿಗೆ ಬಂದು ಪುತ್ತೂರಿನ ಆರಾಧನಾ ಟೂರಿಸ್ಟ್ ಹೋಂ ನಲ್ಲಿ ತಂಗಿ ಬಾಡಿಗೆ ಕಾರನ್ನು ಅಲ್ಲಿಯೇ ಪಾರ್ಕ್ ಮಾಡಿಸಿ ಚಾಲಕನಿಗೆ ಬಾಡಿಗೆ ಕೊಡದೇ ಚಾಲಕನಿಗೆ ಅಲ್ಲಿಯೇ ತಂಗಲು ಹೇಳಿ ಅದೇ ದಿನ ಸಂಜೆ 4.00 ಗಂಟೆಗೆ ಚಾಲಕ ಇಲ್ಲದ ಸಮಯದಲ್ಲಿ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಇನ್ನು ಕಳವು ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಿಲಾಗಿದ್ದು, ನಂತರ ಜಾಮೀನು ಪಡೆದುಕೊಂಡು 2 ಜನ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಯಾದ ಹನೀಫ್ ನನ್ನು 04 ನವಂಬರ್ 2018 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಬಿ.ಸುರೇಶ್ ಪ್ರಭು ಎಂಬತಾನನ್ನು 16 ಆಗಸ್ಟ್ 2022ರಂದು ದಸ್ತಗಿರಿ ಮಾಡಲಾಗಿದೆ.
ಆರೋಪಿಯನ್ನು ಮಂಗಳೂರು ಎಂಬಾತನನ್ನು ಹೆಚ್.ಸಿ 322 ಪರಮೇಶ್ವರರವರು ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚಿದ್ದು, ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಮತ್ತು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಮತ್ತು ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ರವರ ಆದೇಶದಂತೆ ಎಎಸ್ಐ ಚಂದ್ರ ಮತ್ತು ಹೆಚ್.ಸಿ 322 ಪರಮೇಶ್ವರರವರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.