ಸುಳ್ಯ, ಆ 16 (DaijiworldNews/MS): ನಾಲ್ಕು ವರ್ಷ ಮಗುವಿಗೆ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ಅಮಾನವೀಯ ಘಟನೆ ಸುಳ್ಯದ ನಾವೂರಿನಲ್ಲಿ ನಡೆದಿದೆ.
ಮಗು ಹಟ ಹಿಡಿಯುತ್ತಿದೆ ಎಂದು ಸಟ್ಟುಗದಲ್ಲಿ ಬರೆ ಹಾಕಿದ್ದು, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ನೆಕ್ರಾಜೆ ಮನೆಗೆ ಧಾವಿಸಿ ಪರಿಶೀಲಿಸಿದ್ದಾರೆ.
ಘಟನೆ ಆರು ದಿನಗಳ ಹಿಂದೆ ನಡೆದಿದೆಯೆನ್ನಲಾಗಿದ್ದು ಬಳಿಕ ಮಗುವನ್ನು, ಸಿ.ಡಿ.ಪಿ.ಒ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.