ಉಡುಪಿ, ಆ 17 (DaijioworldNews/HR): ಬ್ರಹ್ಮಗಿರಿಯಲ್ಲಿರುವ ಸಾವರ್ಕರ್ ಬ್ಯಾನರ್ಗೆ ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಮತ್ತು ಬಿಜೆಪಿ ಕಾರ್ಯಕರ್ತರು ಮಾಲಾರ್ಪಣೆ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಡೋಂಗಿ ದೇಶಭಕ್ತರನ್ನು ಕಾಂಗ್ರೆಸ್ ಇಟ್ಟುಕೊಂಡಿದ್ದು, ಕಾಂಗ್ರೆಸಿಗರು ಸ್ವಾತಂತ್ರ್ಯ ಸಂಗ್ರಾಮ ಮನೆ ಬಾಗಿಲಿನಿಂದ ಆರಂಭವಾಗಿದೆ ಎಂದು ಹೇಳುತ್ತಾರೆ. ಆ ಕಾಂಗ್ರೆಸಿಗರಿಗೆ ಸಾರ್ವಕರ್ ಮತ್ತು ನೇತಾಜಿ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡಿದ್ದೇವೆ. ಮುಂದೆ ಸಾರ್ವಕರ್ ಅವರ ಪುತ್ಥಳಿ ನಿರ್ಮಿಸಿ ದಿಟ್ಟ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಇನ್ನು ದೇಶದಲ್ಲಿ ಅಶಾಂತಿಯ ವಾತವರಣ ಸೃಷ್ಟಿ ಮಾಡುವುದು, ಕೋಮುಗಲಭೆಗೆ ಹುನ್ನಾರ ಕೊಡುವುದು, ಸಾರ್ವಜನಿಕ ಸೊತ್ತನ್ನು ನಾಶ ಮಾಡುವ ಹಿನ್ನಲೆ ಇರುವ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳು 75 ನೇ ಸ್ವಾಂತ್ರೋತ್ಸವದ ಸಂದರ್ಭದಲ್ಲಿ ತಮ್ಮ ಚಾಳಿಯನ್ನು ಮುಂದುವರಿಸಿದ್ದು, ಅದನ್ನು ಮಟ್ಟ ಹಾಕುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.
60 ವರ್ಷ ಕಾಂಗ್ರೆಸ್ ಆಡಳಿತ ಮಾಡಿ ದೇಶವನ್ನು ಲೂಟಿ ಹೊಡೆದಿದ್ದು, ಬೆರಳೆಣಿಕೆಯ ಕಾಂಗ್ರೆಸ್ ಪುಂಡರು ಈಗ ಇದ್ದಾರೆ. ಕೇವಲ ಅಲ್ಪ ಸಂಖ್ಯಾತ ಮತಗಳನ್ನು ಓಲೈಕೆ ಮಾಡಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಉಡುಪಿಯಲ್ಲಿ ಬೆರಳೆಣಿಕೆಯ ಕಾಂಗ್ರೆಸ್ ಪುಂಡರು ಇದನ್ನು ತೆರವುಗೊಳಿಸಲು ವಿನಂತಿಸಿದ್ದಾರೆ. ತಾಕತ್ತು ಇದ್ದರೇ ಇದನ್ನು ತೆರವು ಮಾಡಲಿ. ಮುಂದೆ ಅವರ ಮನೆ ಅಂಗಳದಲ್ಲಿ ಭಾವಚಿತ್ರವನ್ನು ತೆರವು ಅನಾವರಣ ಮಾಡುತ್ತೇವೆ ಎಂದು ಸವಾಲಾಕಿದ್ದಾರೆ.
ಇನ್ನು ಸಿದ್ದರಾಮಯ್ಯ ಬಹಳಷ್ಟು ಹೇಳಿಕೆ ನೀಡಿದ್ದಾರೆ. ಮುಸ್ಲಿಂರ ಪ್ರದೇಶದಲ್ಲಿ ಭಾವಚಿತ್ರ ಹಾಕಬೇಡಿ ಎಂದಿದ್ದಾರೆ. ಈ ಹಿಂದೆ ಕೂಡ ಜಿನ್ನಾ ಇದೇ ರೀತಿ ಮಾಡಿ ದೇಶ ವಿಭಜನೆಗೆ ಕಾರಣರಾಗಿದ್ದರು.
ಜಿನ್ನಾನ ಮತ್ತೊಂದು ರೂಪವಾಗಿ ಸಿದ್ದರಾಮಯ್ಯ ಹುಟ್ಟಿದ್ದಾರೆ. ಮೊನ್ನೆಯಷ್ಟೇ 75 ಹುಟ್ಟುಹಬ್ಬ ಆಚರಣೆ ಮಾಡಿದ್ದೀರಿ. 75 ರ ನಂತರ ಸಿದ್ದರಾಮಯ್ಯನಿಗೆ ಅರಳು ಮರಳು ಆಗಿದೆ. ತಾಕತ್ತು ಇದ್ದರೇ ನೀವು ಅದನ್ನು ತೆರವುಗೊಳಿಸುವ ಕೆಲಸ ಮಾಡಿ. ನಿಮ್ಮ ಮನೆಯ ಅಂಗಳದಲ್ಲಿ ಭಾವಚಿತ್ರ ಇಟ್ಟುಕೊಂಡ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
1970 ರಲ್ಲಿ ಇಂದಿರಾ ಗಾಂಧಿಯವರು ಸಾರ್ವಕರ್ ಭಾವಚಿತ್ರ ಇರುವ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಅವರ ನಿಜ ಬಣ್ಣ ಏನೆಂಬುದನ್ನು ಇಂದು ತೋರಿಸಿದೆ. ಅಂಡಮಾನ್ ವಿಮಾನ ನಿಲ್ದಾಣಕ್ಕೆ ವೀರ ಸಾರ್ವಕರ್ ಹೆಸರಿಡಲಾಗಿದ್ದು ಎಂದು ಹೇಳಿದ್ದಾರೆ.