ಮಂಗಳೂರು, ಆ 16 (DaijiworldNews/SM): ರಾಜ್ಯದಲ್ಲಿ ತಲೆದೋರಿರುವ ಮರಳುನ ಸಮಸ್ಯೆ ನೀಗಿಸಲು ಸರಕಾರ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮರಳು ಸಮಸ್ಯೆ ನಿವಾರಣೆಗೆ ಜಲ್ಲಿ ಕ್ರಷರ್ ಗಳ ಸಂಖ್ಯೆ ಹೆಚ್ಚಿಸಲು ಸರಕಾರ ನಿರ್ಧಾರ ಕೈಗೊಂಡಿದೆ.
ಮರಳಿನ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಹೆಚ್ಚು ಜಲ್ಲಿ ಕ್ರಷರ್ ಗಳಿಗೆ ಅನುಮತಿ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದು ಗಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳು ನೀತಿಗೆ ತಿದ್ದುಪಡಿ ತಂದು ಹೆಚ್ಚು ಜಲ್ಲಿ ಕ್ರಷರ್ ಗಳಿಗೆ ಅನುಮತಿ ನೀಡುವುದರಿಂದ ಎಂ-ಸ್ಯಾಂಡ್ ಉತ್ಪಾದನೆಗೆ ಉತ್ತೇಜನೆ ನೀಡಿದಂತಾಗಲಿದೆ. ಇದರಿಂದ ಅಕ್ರಮ ಜಲ್ಲಿ ಕ್ರಷರ್ ಗಳ ಹಾವಳಿಗೆ ಕಡಿವಾಣ ಹಾಕಿದಂತಾಗಲಿದೆ.
45 ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದೆ. ಇದರಲ್ಲಿ 35 ಲಕ್ಷ ದಶಲಕ್ಷ ಟನ್ನಷ್ಟು ಬೇಡಿಕೆ ಎಂಸ್ಯಾಂಡ್ನಿಂದಪೂರೈಕೆಯಾಗುತ್ತಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ಮರಳಿನ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ನಿವಾರಣೆಗೆ ಸರಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.