ಉಡುಪಿ, ಆ 16 (daijiworldNews/HR): ಬ್ರಹ್ಮಗಿರಿ ವೃತ್ತದಲ್ಲಿ ಹಿಂದೂ ರಾಷ್ಟ್ರದ ಹೆಸರಿನ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.
ಬ್ಯಾನರ್ನಲ್ಲಿ ವೀರ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಭಾವಚಿತ್ರವಿದ್ದು, ಅದನ್ನು ತೆರವುಗೊಳಿಸುವಂತೆ ಪಿಎಫ್ಐ ಪೊಲೀಸರಿಗೆ ಮನವಿ ಸಲ್ಲಿಸಿತ್ತು.
ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಮೂರು ದಿನಗಳ ಕಾಲ ಬ್ಯಾನರ್ಗೆ ಉಡುಪಿ ನಗರಸಭೆ ಅನುಮತಿ ನೀಡಿದೆ.