ಉಡುಪಿ, ಆ 15 (DaijiworldNews/HR): ಸಾವರ್ಕರ್ ಬಗ್ಗೆ ಆಕ್ಷೇಪಣೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಅವರ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬ್ರಹ್ಮಗಿರಿ ವೃತ್ತದಲ್ಲಿ ಹಾಕಿರುವ ಬ್ಯಾನರ್ ತೆರವುಗೊಳಿಸುವಂತೆ ಪಿಎಫ್ಐ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಾವರ್ಕರ್ ಎರಡು ಕರಿನೀರಿನ ಶಿಕ್ಷೆ ಅನುಭವಿಸಿರುವ ಹೋರಾಟಗಾರ. ಸಾವರ್ಕರ್ ಅವರ ಬಗ್ಗೆ ಗೊತ್ತಾಗಲು ಅಂಡಾಮಾನ್ ಗೆ ಭೇಟಿ ಮಾಡಬೇಕು. ಸಾವರ್ಕರ್ ಬಗ್ಗೆ ಆಕ್ಷೇಪಣೆ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಾವರ್ಕರ್ ಆಕ್ಷೇಪಿಸುವುದು ಅಂದ್ರೆ ಸ್ವಾತಂತ್ರ್ಯವನ್ನು ಆಕ್ಷೇಪಿಸಿದಂತೆ. ಅವರೊಬ್ಬ ಅಪ್ರತಿಮ ದೇಶಭಕ್ತ. ಪಿಎಫ್ಐ ವಿರೋಧಿಸುತ್ತದೆ ಎಂದರೆ ಸಾವರ್ಕರ್ ಫೋಟೋ ತೆಗೆಯಲು ಸಾಧ್ಯವಿಲ್ಲ ಎಂದರು.
ಇನ್ನು ಟಿಪ್ಪು ಸಾವರ್ಕರ್ ಹೋಲಿಕೆ ಒಂದು ವ್ಯವಸ್ಥಿತ ಷಡ್ಯಂತ್ರ. ಸಣ್ಣ ಘಟನೆ ಇಟ್ಟುಕೊಂಡು ಅಶಾಂತಿ ಸೃಷ್ಟಿಸಲು ಪಿಎಫ್ಐ ಸಂಘಟನೆ ಯತ್ನಿಸುತ್ತಿದೆ. ಸರಕಾರ ಇಂಥವರನ್ನು ಹದ್ದುಬಸ್ತಿನಲ್ಲಿ ಇಡುತ್ತದೆ. ಪೊಲೀಸ್ ಇಲಾಖೆ, ಗೃಹ ಇಲಾಖೆ ಎಚ್ಚರಿಕೆ ಹೆಜ್ಜೆ ಇಡುತ್ತದೆ. ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ಪೂರ್ವ ನಿಯೋಜಿತ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.