ಬಂಟ್ವಾಳ, ಆ 15 (DaijiworldNews/HR): ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಗಿದ್ದು, ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ 5500 ವಿದ್ಯಾರ್ಥಿಗಳಿಂದ 75ರ ಸಂಕೇತ ರಚಿಸಲಾಯಿತು.
ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ. ಎ. ಸುಬ್ರಹ್ಮಣ್ಯ ಭಟ್ ಚನಿಲ ಧ್ವಜಾರೋಹಣ ಮಾಡಿದರು.
ಈ ಸಂದರ್ಭ ಉಮಾಶಿವ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷರಾದ ರಾಕೋಡಿ ಈಶ್ವರ ಭಟ್, ಉದ್ಯಮಿಗಳಾದ ಉಲ್ಲಾಸ್, ಅಕ್ಷಯ್ ಮೋಟಾರ್ಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜೈಕಿಶನ್, ರಾಮಕೃಷ್ಣ ಕ್ರೆಡಿಟ್ ಕೊ. ಅಪರೇಟಿವ್ ಸೊಸೈಟಿಯ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಪಿಲಿಂಜ, ಹಿರಿಯರಾದ ಡಾ. ಕಮಲ ಪ್ರ.ಭಟ್, ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್ ಎನ್, ಆಡಳಿತ ಮಂಡಳಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು, ವಿಭಾಗ ಪ್ರಮುಖರು, ಪೋಷಕರು, ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಇನ್ನು ಧ್ವಜಾರೋಹಣದ ಬಳಿಕ ವಿವಿಧ ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.