ಮಂಗಳೂರು, ಆ 15 (DaijiworldNews/HR): ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದವು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪರಿಣಾಮವಾಗಿ ನಾವು ಇಂದು ಸ್ವತಂತ್ರ ಇದ್ದೇವೆ. ಸಂವಿಧಾನವನ್ನು ಉಳಿಸಿ ಅದರಂತೆ ನಡೆಯುವುದೇ ನಿಜವಾದ ಸ್ವಾತಂತ್ರ್ಯದ ಲಕ್ಷಣವಾಗಿದೆ. ಆಮ್ ಆದ್ಮಿ ಪಕ್ಷದ ಮುಖ್ಯ ಧೋರಣೆ ಇದಾಗಿರುವುದರಿಂದ ನಾವೆಲ್ಲಾ ಕೇಜ್ರಿವಾಲ್ ಅವರೊಂದಿಗೆ ಕೈ ಜೋಡಿಸಿ ನಮ್ಮ ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ನಿರ್ಮಿಸಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ವತಿಯಿಂದ ಕುಲಶೇಖರದ ಕಲ್ಪನೆ ಬಯಲಿನಲ್ಲಿ ರಾಷ್ಟ್ರ ಧ್ವಜರೋಹನ ಮಾಡಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡರಾದ ಸ್ಟೀಫನ್ ಪಿಂಟೋ, ವೆಂಕಟೇಶ ಬಾಳಿಗಾ, ಪ್ರೀತಿ ಕರ್ಕೇರಾ ಶುಭ ಕೋರಿದರು.
ರಿಶಾಲ್ ಮೆಲ್ಬಾ ಕ್ರಾಸ್ತಾ ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಅವ್ರೆನ್ ಡಿಸೋಜಾ ವಂದಿಸಿದರು. ಅನಿಲ್ ಡೆಸ್ಸ ಕಾರ್ಯಕ್ರಮ ನಿರ್ವಹಿಸಿದರು. ಬೆನೆಟ್ ಕ್ರಾಸ್ತಾ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಮಾಜಿ ದಕ್ಷಿಣ ಕನ್ನಡ ಎಎಪಿ ಅಧ್ಯಕ್ಷರಾದ ರಾಜೇಂದ್ರ ಕೆ. ಪಿ. , ಶಾನನ್ ಪಿಂಟೋ, ನವೀನ್ ಡಿಸೋಜಾ, ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ನವೀನ್ಚಂದ್ರ ಪೂಜಾರಿ, ಮಂಗಳೂರು ದಕ್ಷಿಣ ಸಂಘಟನಾ ಉಸ್ತುವಾರಿ ದೇವಿಪ್ರಸಾದ್ ಬಜಿಲಕೇರಿ, ರೋನಿ ಕ್ರಾಸ್ತಾ, ಶ್ರೀನಿವಾಸ್, ರವಿಪ್ರಸಾದ್, ಖಾಲಿದ್, ಫಾಝಿಲ್, ಜೇಮ್ಸ್ ಹಾಗು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.