ಮಂಗಳೂರು, ಆ 14 (DaijiworldNews/DB): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ ಸುಮಾರು 900 ಕೆಜಿ ದವಸ ಧಾನ್ಯಗಳಿಂದ ಶ್ರೀ ಕ್ಷೇತ್ರದ ಅಂಗಣದಲ್ಲಿ ಬೃಹತ್ ತಿರಂಗಾವನ್ನು ವಿಶಿಷ್ಟವಾಗಿ ಭಾನುವಾರ ವಿನ್ಯಾಸಗೊಳಿಸಲಾಯಿತು.
ಗುರುಬೆಳದಿಂಗಳು ಆಶ್ರಯದಲ್ಲಿ ಕಲಾವಿದ, ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ 30 ಮಂದಿ ಗುರು ಬೆಳದಿಂಗಳು ಸದಸ್ಯರು ಹಾಗೂ ಕ್ಷೇತ್ರದ ಸಿಬಂದಿ ವರ್ಗದ ಸಹಕಾರದಿಂದ 18 ಗಂಟೆಗಳ ನಿರಂತರ ಶ್ರಮದೊಂದಿಗೆ ದವಸ ಧಾನ್ಯಗಳ ತಿರಂಗಾ ಸುಂದರವಾಗಿ ಮೂಡಿಬಂತು. 900 ಕೆಜಿ ಧಾನ್ಯ, 100 ಕೆಜಿ ತರಕಾರಿ, 38 ಅಡಿ ವೃತ್ತ, 54 ಕಳಶ, 108 ಬಾಲೆಎಲೆ, 500 ವೀಳ್ಯದೆಲೆ ,100 ಕೆಜಿ ಬೆಳ್ತಿಗೆ ಅಕ್ಕಿಯನ್ನು ಬಳಸಲಾಯಿತು.
ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಗುರು ಬೆಳದಿಂಗಳು ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಉರ್ಮೀಳಾ ರಮೇಶ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೋ, ಕಾರ್ಪೊರೇಟರ್ ಅನಿಲ್, ಲೀಲಾಕ್ಷ ಕರ್ಕೇರಾ, ಕ್ಷೇತ್ರದ ಆಡಳಿತ ಸಮಿತಿ ಸದಸ್ಯೆ ಗೌರವಿ ಪಿ.ಕೆ, ಕೃತಿನ್, ಗುರು ಬೆಳದಿಂಗಳು ಸದಸ್ಯರಾದ ಗಜೇಂದ್ರ ಪೂಜಾರಿ, ಅನುಸೂಯಾ ಸಚಿನ್, ರಾಜೇಶ್ ಸುವರ್ಣ, ಪ್ರವೀಣ್ ಅಂಚನ್, ಪ್ರಮೋದ್ ಕೋಟ್ಯಾನ್, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಚಿತ್ತರಂಜನ್ ಕಂಕನಾಡಿ ಗರೋಡಿ, ಶೈಲೇಂದ್ರ ವೈ. ಸುವರ್ಣ, ರವಿ ಪೂಜಾರಿ ಚಿಲಿಂಬಿ, ಜಯರಾಮ ಕಾರಂದೂರು ಮೊದಲಾದವರಿದ್ದರು.