ಕಾಸರಗೋಡು, ಆ 13 (DaijiworldNews/HR): ಬೇಕಲ ತೃಕ್ಕನ್ನಾಡ್ ತೀರದಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು, ಮೂರು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಈ ತೀರದ ಹತ್ತಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ.
ಶನಿವಾರ ಮಧ್ಯಾಹ್ನ ಬಳಿಕ ಕಡಲ್ಕೊರೆತ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಇತರ ತೀರ ಗಳಲ್ಲೂ ಕಡಲ್ಕೊರೆತ ಹೆಚ್ಚಾಗಿದೆ.
ಇನ್ನು ಹಲವಾರು ತೆಂಗುಗಳು ಯಾವುದೇ ಸಂದರ್ಭದಲ್ಲಿ ಸಮುದ್ರ ಪಾಲಾಗುವ ಸ್ಥಿತಿಯಲ್ಲಿದ್ದು, ಮೂರು ಕುಟುಂಬಗಳ 17 ಮಂದಿಯನ್ನು ಉಡುಮದ ವೃದ್ದ ಸದನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.