ಕಾರ್ಕಳ, ಆ 13 (DaijiworldNews/HR): ಭಾರತ ಸ್ವಾತಂತ್ರ್ಯ ಅಮೃತಾ ಮಹೋತ್ಸವದ ಪ್ರಯುಕ್ತ ಅನಂತಶಯನ ವೃತ್ತದಿಂದ ಗಾಂಧಿಮೈದಾನದವರೆಗೆ ಸಾಗಿಬಂದ ಬೃಹತ್ ಮೆರವಣಿಯಲ್ಲಿ 75 ಮೀಟರ್ ಉದ್ದದ ರಾಷ್ಟ್ರಧ್ವಜಕ್ಕೆ ನಗರದೆಲ್ಲೆಡೆ ನಾಗರಿಕರು ಪುಷ್ಪಗುಚ್ಚ ಸಮರ್ಪಿಸಿ, ಜಯಕಾರ ಮೊಳಗಿಸಿ ಗೌರವ ಸಮರ್ಪಣೆ ಸಲ್ಲಿಸಿದರು.
ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖಾ ಸಚಿವ ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಭಾರತೀಯ ಯುವಮೋರ್ಚಾ ಘಟಕದವು ಈ ಕಾರ್ಯಕ್ರಮವನ್ನು ಆಯೋಜಿಸಿತು.
ರಾಷ್ಟ್ರಧ್ವಜದ ತ್ರಿವರ್ಣದ ಸಂಕೇತವಾಗಿ ಮರವಣಿಗೆಯ ಆರಂಭದಲ್ಲಿ ಮಹಿಳೆಯರುವ ಕೇಸರಿ, ಬಿಳಿ, ಹಸಿರು ವರ್ಣದ ಸೀರೆಯನ್ನುಟ್ಟು ಸಾಗಿದರೆ, ಅದರ ಹಿಂದೆ 75 ಮೀಟರ್ ಉದ್ದದ ರಾಷ್ಟ್ರಧ್ವವನ್ನು ಹಿಡಿದ ಯುವ ಸಮುದಾಯದ ತಂಡ ಎಲ್ಲರ ಗಮನ ಸೆಳೆಯಿತು.
ಶ್ವೇತಾ ವರ್ಣದ ಖಾದಿ ವಸ್ತ್ರದ ಜುಬ್ಬಾ ಧರಿಸಿದ ಸಚಿವ ವಿ.ಸುನೀಲ್ಕುಮಾರ್ ಅವರು ಬೃಹತ್ ಗಾತ್ರದ ರಾಷ್ಟ್ರಧ್ವಜವನ್ನು ಹಿಡಿದು ಕಾಲ್ನಡಿಗೆಯ ಮೂಲಕ ಸಾಗಿಬಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಬೋಳ ಪ್ರಭಾಕರ ಕಾಮತ್, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಎಂ.ಕೆ.ವಿಜಯಕುಮಾರ್, ಉದಯಕುಮಾರ್ ಇರ್ವತ್ತೂರು, ನಿತ್ತಾನಂದ ಪೈ, ಬೋಳ ಶ್ರೀನಿವಾಸ ಕಾಮತ್,ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಸುಮೀತ್ ಶೆಟ್ಟಿ, ವಿಜಯಶೆಟ್ಟಿ ಮೊದಲಾದವರು ಜೊತೆಗಿದ್ದರು.