ಮಂಗಳೂರು,ಆ 13 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ಹಾಗೂ ಅನಧಿಕೃತ ಅಗೆತದ ಬಗ್ಗೆ ದೂರುಗಳು ಇದ್ದಲ್ಲಿ ವಾಟ್ಸಪ್ ಸಂಖ್ಯೆ 9449007722 ಹಾಗೂ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824- 2220306 ಇಲ್ಲಿಗೆ ಫೋಟೋ ಸಹಿತ ದೂರು ಸಲ್ಲಿಸಬಹುದು ಎಂದು ಮನಪಾ ಪ್ರಕಟಣೆ ತಿಳಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿ ಮಳೆಗಾಲದಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ಸಾಮಾನ್ಯ ಮಳೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುತ್ತದೆ. ಭಾರೀ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಉಂಟಾಗುವ ಹೊಂಡ-ಗುಂಡಿಗಳನ್ನು ಕಾಲಕಾಲಕ್ಕೆ ಶೀಘ್ರ ದುರಸ್ತಿಗೆ ಕ್ರಮ ವಹಿಸಲಾಗುತ್ತಿರುತ್ತದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 ನೀರು ಸರಬರಾಜು ಯೋಜನೆ ಕಾಮಗಾರಿ, ಗೈಲ್ ಗ್ಯಾಸ್ ಕಂಪೆನಿಯಿಂದ ಗ್ಯಾಸ್ ಲೈನ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿರುತ್ತದೆ. ಈ ಕಾಮಗಾರಿಗಳ ಭಾಗದ ರಸ್ತೆಗಳ ಮರು ನಿರ್ಮಾಣವನ್ನು ಸಂಬಂಧಿಸಿದ ಇಲಾಖೆಯವರು ಕಾಲಕಾಲಕ್ಕೆ ನಿರ್ವಹಿಸುತ್ತಿರುತ್ತಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳು, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾದುಹೋಗಿರುತ್ತದೆ. ಈ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಸಂಬಂಧಿಸಿದ ಇಲಾಖೆಯವರಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ.
ಹೊಂಡ-ಗುಂಡಿಗಳ ಹಾಗೂ ಅನಧಿಕೃತ ಅಗೆತಗಳ ಬಗ್ಗೆ ದೂರುಗಳಿದ್ದಲ್ಲಿ ವಾಟ್ಸ್ಯಾಪ್ ಸಂಖ್ಯೆ 9449007722 ಹಾಗೂ ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306 ಗೆ ತಿಳಿಸಬಹುದಾಗಿದೆ.ಅಲ್ಲದೇ ವಾರ್ಡ್ ಹಂತದಲ್ಲಿ ಸಂಬಂಧಪಟ್ಟ ವಾರ್ಡ್ ಇಂಜಿನಿಯರ್ ಗಳನ್ನು ಸಂಪರ್ಕಿಸಬಹುದಾಗಿದೆ. ಈ ವಿಷಯಗಳನ್ನು ಸಾರ್ವಜನಿಕರು ಮನಗಂಡು ಪಾಲಿಕೆಯೊಂದಿಗೆ ಸಹಕರಿಸುವಂತೆ ಕೋರಿಕೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.