ಕಾಸರಗೋಡು, ಆ 12 (DaijiworldNews/DB): ಜಿಲ್ಲೆಯಲ್ಲಿ ಎಲ್ಲರಿಗೂ ಎಲ್ಲಾ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ಸರ್ಕಾರದ ಗುರಿ ಎಂದು ಆರೋಗ್ಯ ಇಲಾಖೆಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆಯಂತೆ ಮೊಗ್ರಾಲ್ ಸರ್ಕಾರಿ ಯುನಾನಿ ಡಿಸ್ಪೆನ್ಸರಿಯಲ್ಲಿ ನಿರ್ಮಿಸಲಾದ ಹೊಸ ಬ್ಲಾಕ್ನ ನ್ಯಾಷನಲ್ ಆಯುಷ್ ಮಿಷನ್ನ ನವೀಕೃತ ಕಟ್ಟಡ ಮತ್ತು ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್ನ್ನು ಅವರು ಉದ್ಘಾಟಿಸಿದರು.
ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಪಿ. ಮುಹಮ್ಮದ್ ಮುನೀರ್, ನ್ಯಾಷನಲ್ ಆಯುಷ್ ಮಿಷನ್ ಕಾಸರಗೋಡು ಡಿಪಿಎಂ ಕೆ.ಸಿ. ಅಜಿತ್ ಕುಮಾರ್, ಕಾಸರಗೋಡು ಪ್ಯಾಕೇಜ್ ಅಭಿವೃದ್ಧಿ ವಿಶೇಷಾಧಿಕಾರಿ ಐ.ಪಿ. ರಾಜ್ಮೋಹನ್, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಅಶ್ರಫ್ ಕಾರ್ಲ, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಎಂ. ಸಬೂರ, ಬಿ.ಎ. ರಹ್ಮಾನ್ ಆರಿಕ್ಕಾಡಿ, ಎಂ.ಪಿ. ನಸೀಮಾ ಖಾಲಿದ್, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಖ್, ಬ್ಲಾಕ್ ಪಂಚಾಯತ್ ಸದಸ್ಯೆ ಝೀನತ್ ನಸೀರಾ, ಭಾರತೀಯ ಚಿಕಿತ್ಸಾ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಜೋಮಿ ಜೋಸೆಫ್, ಕುಂಬಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೀತಾ ಕುಮಾರಿ, ಡಾ. ಕೆ. ಶಕೀರ್ ಅಲಿ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಸಿ.ಎ. ಸುಬೈರ್, ಸಯ್ಯದ್ ಹಾದಿ ತಂಘಳ್ ಮೊಗ್ರಾಲ್, ರವಿ ಪೂಜಾರಿ, ರಮೇಶ್ ಭಟ್, ಜಯರಾಮ್ ಬಳ್ಳಂಕೂಡಲ್, ತಾಜುದ್ದೀನ್ ಮೊಗ್ರಾಲ್, ಸಿದ್ಧೀಕಾ ಲಿ. ಮೊಗ್ರಾಲ್, ಅನ್ವರ್ ಹುಸೇನ್ ಆರಿಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ಸ್ವಾಗತಿಸಿ, ಉಪಾಧ್ಯಕ್ಷ ನಾಸರ್ ಮೊಗ್ರಾಲ್ ವಂದಿಸಿದರು.