ಕಾಸರಗೋಡು, ಆ 11 (DaijiworldNews/SM): ಬದಿಯಡ್ಕದಲ್ಲಿ ನಿರ್ಮಿಸಲಾಗುವ ಕಯ್ಯಾರ ಕಿಞಣ್ಣ ರೈ ಸ್ಮಾರಕ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಯೋಜನೆ ಅಂತಿಮ ಗೊಳಿಸಲಾಗಿದೆ.
ಕಿಞ್ಚ ಣ್ಣ ರೈ ಕುಟುಂಬಸ್ಥರು ಒಳಗೊಂಡ ಕವಿತಾ ಕುಟೀರ ಟ್ರಸ್ಟ್ ಗೆ ಹಸ್ತಾ೦ ತರಿಸಿದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಕೇರಳ ಸರಕಾರ ಮುಂಗಡಪತ್ರ ದಲ್ಲಿ ಮೀಸಲಿರಿಸಿದ 50 ಲಕ್ಷ ರೂ. , ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಒದಗಿಸಿದ ಒಂದು ಕೋಟಿ ರೂ . ವೆಚ್ಚದಲ್ಲಿ ಭವನ ನಿರ್ಮಿಸಲಾಗುತ್ತಿದೆ.
ಈ ಕುರಿತು ಚರ್ಚಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಿರ್ಮಾಣ ಕಾಮಗಾರಿ ಆರಂಭಿಸುವ ಮೊದಲು ಜಿಲ್ಲಾ ಪಂಚಾಯತ್ , ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಿದೆ. ಕಾಮಗಾರಿ ಬಗ್ಗೆ ನಿರೀಕ್ಷಿಸಲು ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿಲ್ಲಾಧಿಕಾರಿ , ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ , ಕವಿತಾ ಕುಟೀರ ಟ್ರಸ್ಟ್ ಪ್ರತಿನಿಧಿಗಳು ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಪ್ರತಿನಿಧಿಗಳು , ಅಧಿಕಾರಿಗಳು , ಗಡಿ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಮೊದಲಾದವರ ನೇತೃತ್ವದಲ್ಲಿ ನಿಗಾ ಸಮಿತಿಯಲ್ಲಿ ರುವರು . ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ , ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕವಿತಾ ಕುಟೀರ ಕಾರ್ಯದರ್ಶಿ ಡಾ.ಪ್ರಸನ್ನ ರೈ, ಜಿಲ್ಲಾ ಪಂಚಾಯತ್ ಸದಸ್ಯೆ ಎಂ.ಶೈಲಜಾ ಭಟ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೆ.ಪ್ರದೀಪನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನ್, ನ್ಯಾಯವಾದಿ ಪ್ರಕಾಶ್ ಅಮ್ಮಣ್ಣಾಯ, ಪ್ರೊ.ಎ.ಶ್ರೀನಾಥ್, ಕೆ.ಬಾಲಕೃಷ್ಣನ್, ವೀರೇಂದ್ರ ಪ್ರಸಾದ್, ಪ್ರಕಾಶ್ ಮತಿಹಳ್ಳಿ, ಎ.ಆರ್.ಸುಬ್ಬಯ್ಯಕಟ್ಟೆ , ಬಿ.ಎನ್.ಸುರೇಶ್, ಎಂ.ಜೆ.ತಂಗಚ್ಚನ್ ಮೊದಲಾದವರು ಉಪಸ್ಥಿತರಿದ್ದರು