ಕುಂದಾಪುರ, ಆ 11 (DaijiworldNews/MS): ಮನೆಮಂದಿ ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಮನೆಗೆ ಕಳ್ಳಹಾಕಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಆಧುನಿಕ ತಂತ್ರಜ್ಞಾನ ಬಳಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮರವಂತೆ ಯ ಬೈಂದೂರು, ಸಾಧನ ರಸ್ತೆಯ ನಿವಾಸಿ ಸುಭಾಶ್ಚಂದ್ರ ಆಚಾರ್ಯ (40) ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಎಂಟು ಗ್ರಾಂ ತೂಕದ ಒಂದು ಚಿನ್ನದ ಬಳೆ, 12 ಗ್ರಾಂ ತೂಕದ ಒಂದು ಹಗ್ಗದ ಚೈನ್, ಬಿಳಿ ಕಲ್ಲು ನಾಲ್ಕು ಗ್ರಾಂ ತೂಕದ ಚಿನ್ನದ ಬೆರಳಿನ ಉಂಗುರ, ಹಸಿರು ಕಲ್ಲು ಹೊಂದಿರುವ ಮೂರು ಗ್ರಾಂ ಚಿನ್ನದ ಒಂದು ಬೆರಳಿನ ಉಂಗುರ ಮತ್ತು 1610 ರೂ ನಗದು ವಶಪಡಿಸಿಕೊಂಡಿದ್ದಾರೆ.
ಕುಂಬಾಶಿಯ ವಿನಾಯಕ ನಗರದ ನಿವಾಸಿ ಮಂಜುನಾಥ ಜೋಗಿ ಎಂಬುವವರ ಮನೆಯಲ್ಲಿ ಜುಲೈ 29 ರಿಂದ ಆಗಸ್ಟ್ 5 ರ ನಡುವೆ ಪಂಡರಿಪುರ ಮತ್ತು ಶಿರ್ಡಿಗೆ ತೀರ್ಥಯಾತ್ರೆಗೆ ತೆರಳಿದ್ದ ವೇಳೆ ಕಳ್ಳತನ ನಡೆದಿತ್ತು ಒಟ್ಟು 1.20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 13500 ರೂಪಾಯಿ ನಗದು ಕಳ್ಳತನವಾಗಿತ್ತು.
ಕುಂದಾಪುರ ಠಾಣೆಯ ಎಎಸ್ಐ ಪ್ರಸಾದ್ಕುಮಾರ್ ಕೆ, ತನಿಖಾ ಪಿಎಸ್ಐ ಸದಾಶಿವ ಆರ್ ಗವರೋಜಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು