ಮಂಗಳೂರು, ಆ 11 (DaijiworldNews/DB): ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಮೀನುಗಾರಿಕಾ ಋತುವಿನ ಆರಂಭದ ಸಂದರ್ಭದಲ್ಲಿ ಮಹಾಜನ ಸಭಾದ ವತಿಯಿಂದ ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಗುರುವಾರ ಸಮುದ್ರ ಪೂಜೆಯನ್ನು ನೆರವೇರಿಸಲಾಯಿತು.
75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜದ ಆಕೃತಿಯನ್ನು ಮರಳಿನಲ್ಲಿ ರಚಿಸಲಾಯಿತು. ಮಂಗಳೂರು ಮೀನುಗಾರಿಕೆ ಇಲಾಖೆಯ ಉಸ್ತುವಾರಿ ಅಧಿಕಾರಿ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಿದರು.
ಮಹಾಜನ ಸಭಾದ ಅಧ್ಯಕ್ಷ ಕೇಶವ ಗುರಿಕಾರ, ಮುಖಂಡರುಗಳಾದ ಶಶಿ ಮೆಂಡನ್, ಮೋಹನ್ ಕರ್ಕೇರಾ, ಲೋಕೇಶ್ ಬೆಂಗ್ರೆ, ನರಸಿಂಹ ಶ್ರೀಯಾನ್ ಮತ್ತಿತರರು ಉಪಸ್ಥಿತರಿದ್ದರು.