ಮಂಗಳೂರು, ಆ 10 (DaijiworldNews/DB): ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಅದ್ಯಪಾಡಿ ಮೋಂತಿಬೈಲು ನಿವಾಸಿ ಮೊಹಮ್ಮದ್ ಅಝರುದ್ದೀನ್ ಅಲಿಯಾಸ್ ಅಝರ್ (31) ಬಂಧಿತ ಆರೋಪಿ. ಬಜಪೆ ಪೊಲೀಸರು ಪರಿಶೀಲನೆಗೆಂದು ಆಝರ್ನ ಮನೆಗೆ ಹೋಗಿದ್ದಾಗ ಆತ ಮತ್ತು ಆತನ ಕುಟುಂಬ ಪೊಲೀಸರಿಗೆ ನಿಂದಿಸಿ, ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆತನ ಮತ್ತು ಆತನ ಕುಟುಂಬದ ವಿರುದ್ದ ದೂರು ದಾಖಲಾಗಿತ್ತು. ಈತ ಮೂಡುಬಿದಿರೆಯ ಕಳ್ಳಬೆಟ್ಟು ಮತ್ತು ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಜಾನುವಾರು ಕಳವು ಮಾಡಿದ್ದ. ಅಲ್ಲದೆ, ಬಂಧನ ತಪ್ಪಿಸಿಕೊಳ್ಳುವುದಕ್ಕಾಗಿ ತಲೆ ಮರೆಸಿಕೊಂಡಿದ್ದ. ಬಜಪೆ ಮತ್ತು ಕಾರ್ಕಳ ನಗರ ಠಾಣೆಯಲ್ಲಿ ಎರಡು ಕಳ್ಳತನ ಮತ್ತು ಜಾನುವಾರು ಕಳ್ಳತನ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಮೂಡುಬಿದಿರೆ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಈ ಹಿಂದೆ ಈತನ ವಿರುದ್ದ ದಾಖಲಾಗಿತ್ತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ನಿರ್ದೇಶನದ ಮೇರೆಗೆ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ಕುಮಾರ್, ಮಂಗಳೂರು ಉತ್ತರ ಉಪ-ವಿಭಾಗ ಎಸಿಪಿ ಎನ್. ಮಹೇಶ್ಕುಮಾರ್ ಅವರು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಕಾಶ್ ಮತ್ತು ಸಿಬಂದಿಯ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಕೂಗಾಡಿರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಅಟೋ ಡ್ರೈವರ್ ಒಬ್ಬನನ್ನು ಮಂಗಳೂರು ಬಂದರು ಪೊಲೀಸರು ಬಂಧಿಸಿದ್ದಾರೆ.
ಮಂಗಳಾದೇವಿ ನಿವಾಸಿ ವಿನೋದ್ ಪೂಜಾರಿ (48) ಬಂಧಿತ ಆರೋಪಿ. ಟ್ರಾಫಿಕ್ ಹೆಚ್ಚಿರುವ ರಸ್ತೆಯಲ್ಲಿ ನಿಧಾನದ ಚಾಲನೆ ಮಾಡುವಂತೆ ರಾವ್ ಆಂಡ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಸೂಚಿಸಿದಾಗ ಅಮಲಿನಲ್ಲಿದ್ದ ಆತ ಪೊಲೀಸರ ಮೇಲೆ ಕೂಗಾಡಿ ರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ್ದಾನೆ. ಸಾರ್ವಜನಿಕವಾಗಿ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರಯದ್ದ ಐಪಿಸಿ ಸೆಕ್ಷನ್ 353ರಡಿ ಪ್ರಕರಣ ದಾಖಲಾಗಿತ್ತು.