ಕಾರ್ಕಳ, ಆ 09 (DaijiworldNews/MS): ರಾಷ್ಟ್ರಧ್ವಜವು ಭಾರತೀಯರಿಗೆ ಸ್ಫೂರ್ತಿಯನ್ನು ನೀಡಿದೆ. ಜೊತೆ ಭಾರತೀಯ ಸಂವಿಧಾನ, ಒಗ್ಗಟ್ಟು, ಜಾತ್ಯತೀತ ನೀತಿಗೆ ಗೌರವ ನೀಡಿವುದರಿಂದ ಪ್ರಜಾಪ್ರಭುತ್ವ ಬಲಿಷ್ಟಗೊಳ್ಳಲು ಪೂರಕವಾಗಿರುತ್ತದೆ. ಸ್ವಾತಂತ್ರ್ಯ ಭಾರತವನ್ನು ವಿಕಾಸದತ್ತ ಕೊಂಡು ಹೊಯ್ಯಲು ಪ್ರಥಮ ಪ್ರಧಾನಿ ನೆಹರು ಅವರ ದೂರದರ್ಶಿತ್ವ ಯೋಚನೆ ಮತ್ತು ಯೋಜನೆ ಕಾರಣವಾಗಿದೆ. ಭಾರತ ಸೇನೆಯ೭ ಸಾಮಾರ್ಥ್ಯ ವು ಬಾಂಗ್ಲಾವಿಮೋಚನೆಯಲ್ಲಿ ವಿಶ್ವಕ್ಕೆ ತೋರ್ಪಡಿಸಿದೆ. ಪಾಕಿಸ್ತಾನದ ಸುಮಾರು 1 ಲಕ್ಷ ಮಿಕ್ಕಿ ಸೈನಿಕರನ್ನು ರಾಷ್ಟ್ರದ ರಾಜ್ಯಧಾನಿಯಲ್ಲಿ ಶರಣಾಗಿದ ಕೀರ್ತಿ ಇದೇ ಮೂಲಕ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಹೇಳಿದರು.
ಜೋಡುರಸ್ತೆಯ ಕುಲಾಲ್ ಭವನದಲ್ಲಿ ಆಯೋಜಿಸಿದ ಸ್ಥಾತಂತ್ರ್ಯ ಭಾರತ ಅಮೃತಮಹೋತ್ಸವದ ಕಾಲ್ನಡಿಗೆ ಜಾಥದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ ಮಾತನಾಡಿ, ಕಾಂಗ್ರೆಸ್ ಇತಿಹಾಸ, ಸ್ವಾತಂತ್ರ್ಯ ಇತಿಹಾಸ ಬೇರೆಯಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್ಸಿಗರು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಕಾಲಘಟ್ಟದಲ್ಲಿ ದೇಶದ ಸ್ಥಿತಿಗತಿ ಹೇಗಿತ್ತು ಎಂಬುವುದನ್ನು ಬಿಜೆಪಿ ಮುಖಂಡರು ಅಭ್ಯಸಿಸದ ಪರಿಣಾಮವಾಗಿ ಬಹುವರ್ಷ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಏನೇನು ಮಾಡಿದೆ ಎಂಬುವುದನ್ನು ಪ್ರಶ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ದೇಶದ ಆರ್ಥಿಕತೆಯ ವೇಗವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಪರಿಣಾಮವಾಗಿ 2023 ಹೊತ್ತಿಗೆ ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಭಾರತ ಪ್ರಜ್ವಲಿಸಲಿದೆ ಎಂದು ವಿಶ್ವ ಆರ್ಥಿಕ ಸಮೀಕ್ಷೆ ತಿಳಿಸಿತ್ತು. ಜವಾಹರ್ ನವೋದಯ ವಿದ್ಯಾಲಯಗಳು, ಪ್ರಮುಖ ರಸ್ತೆಗಳು, ಸೇತುವೆಗಳು, ಹಾಸ್ಟೆಲ್ಗಳು, ಶಿಕ್ಷಣ ಸಂಸ್ಥೆಗಳು, ಭೂಸುಧಾರಣೆ ಕಾನೂನು, ಬ್ಯಾಂಕ್ಗಳ ರಾಷ್ಟ್ರೀಕರಣ, ಸಿಇಟಿ ಯಿಂದ ಉನ್ನತ ಶಿಕ್ಷಣ, ಸಾಮಾಜಿಕ,ಆರ್ಥಿಕ ಬದಲಾವಣೆ ರೈಲು ಸಂಚಾರಗಳು, ವಿಮಾನ ಹಾರಟ, ತಂತ್ರಜ್ಞಾನ, ಸೇನೆಯನ್ನು ಸದೃಢವಾಗಿ ರೂಪಿಸಿರುವುದು ಇವೆಲ್ಲವು ಕಾಂಗ್ರೆಸ್ನ ಅವಧಿಯಲ್ಲಿ ದೇಶ ಕಂಡಿತು ಎಂದು ಹೇಳಿದರು.
ಕಳೆದ 8 ವರ್ಷದಿಂದ ಭಾರತೀಯ ಅರ್ಥಿಕತೆ ಕುಸಿದಿದೆ. ವಿಶ್ವದಲ್ಲಿ ಭಾರತದ ಆರ್ಥಿಕತೆ ಮಟ್ಟ ತೀರಾ ತಳಮಟ್ಟಕ್ಕೆ ಕುಸಿದಿದೆ. ಜಾತಿ-ಜಾತಿಗಳ, ಧರ್ಮ-ಧರ್ಮಗಳ ನಡುವೆ ಕಂದಕ್ ಸೃಷ್ಠಿ ಭಾರತೀಯರೇ ಶತ್ರುಗಳಂತೆ ಹೊಡೆದಾಟ ಜೀವತ್ತೆತ್ತುಕೊಳ್ಳುವ ಪರಿಸ್ಥಿತಿಯನ್ನು ಮಾಡಿರುವುದು ಬಿಜೆಪಿಯ ಸಾಧನೆಯಾಗಿದೆ. ಸರಕಾರದ ಎಲ್ಲ ಸಂಶ್ಥಗಳನ್ನು ಖಾಸಗಿ ರಂಗಕ್ಕೆ ಮಾರಾಟ ಮಾಡಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತಿತ್ತು ಅದರ ಮುಂದಿನ ಭಾಗವಾಗಿ ಭಾರತದ ರಾಷ್ಟ್ರಧ್ವಜವನ್ನು ಮಾರಾಟ ಮಾಡುವ ಸ್ಥಿತಿಗೆ ಬಿಜೆಪಿ ತಲ್ಲು ನಿಲ್ಲಿಸಿದೆ ಎಂದು ಕಿಡಿಕಾರಿದರು.
ಗಾಂಧಿಯನ್ನು ಸಮರ್ಥಿಸಿಕೊಳ್ಳುವ ಬಿಜೆಪಿಗರು ಮಹಾತ್ಮಗಾಂಧಿಯ ಕನ್ನಡಕದ ಚಿತ್ರವನ್ನು ಉಪಯೋಗಿ ಸ್ವಚ್ಛಭಾರತ ಪರಿಕಲ್ಪನೆಯಲ್ಲಿ ಮುಂದಾಗಿರುವುದು ವಿಪರ್ಯಾಸವೆಂದರು.
ದೇಶ ಪ್ರೇಮ ಮೆರೆದ ಪ್ರೇಮ!
ಸ್ವಾತಂತ್ರ್ಯದ ಅಮೃತ ಮಹೋತ್ಸದ ಸಂದರ್ಭದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಕಾಲ್ನಡಿಗೆಯ ಜಾಥವು ಪುಲ್ಕೇರಿ ಬೈಪಾಸ್ನಿಂದ ಆನೆಕೆರೆ,ದಾನಶಾಲೆ, ಅನಂತಶಯನ ಸ್ಮಾಲರ್, ಬಂಡೀಮಠ, ಜೋಡುರಸ್ತೆ ಮೂಲಕವಾಗಿ ೮ ಕಿ.ಮಿ ಕ್ರಮಿಸಿತು. ಇದರಲ್ಲಿ ಕಾಬೆಟ್ಟು ಹವಲ್ದಾರ್ಬೆಟ್ಟಿನ ಪ್ರೇಮ ಎಂಬವರು ತನ್ನ ಎಳೆವಯಸ್ಸಿನ ಮಗುವನ್ನು ಹಿಡಿದು ಭಾರತ ಪರ ಘೋಷಣೆ ಕೂಗುತ್ತಾ ಸಾಗಿ ಬಂದರು.
ಇವರ ದೇಶ ಪ್ರೇಮವನ್ನು ಕೊಂಡಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಭಾಷಣದ ಮೊದಲಿಗೆ ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿ ಅವರಿಗೆ ಹಿರಿಯ ಮುಖಂಡ ನೀರೆ ಕೃಷ್ಣ ಶೆಟ್ಟಿ ಮೂಲಕ ತ್ರಿವರ್ಣ ಶಾಲು ಹಾಕಿ ಗೌರವ ಸಲ್ಲಿಸಿದರು.
ಕಾಲ್ನಡಿಗೆ ಜಾಥಕ್ಕೆ ಅಭಯ!
ಪುಲ್ಕೇರಿ ಬೈಪಾಸ್ ನಿಂದ ಹೊರಟ ಕಾಲ್ನಡಿಗೆ ಜಾಥಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಚಾಲನೆ ನೀಡಿ ಮೆರವಣಿಗೆಯಲ್ಲಿ ಕಾರ್ಯಕರ್ತರೊಂದಿಗೆ ಸಾಗಿಬಂದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಕೋಟ್ಯಾನ್ ಸಂದಭೋಚಿತವಾಗಿ ಮಾತನಾಡಿದರು.ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ದೇವಾಡಿಗ ಅಧ್ಯಕ್ಷತೆ ವಹಿಸಿದರು.ಮುಖಂಡರಾದ ಕೋಟೇಶ್ವರ ಸಹನಾ ಗ್ರೂಪ್ನ ಸುರೇಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರಭಾಕರ ಬಂಗೇರಾ, ರಾಘವ ದೇವಾಡಿಗ, ಅಣ್ಣಪ್ಪ ನಕ್ರೆ, ಮಧುಕರ ಶೆಟ್ಟಿ, ಸತೀಶ್ ದೇವಾಡಿಗ, ಕುಶ ಮೂಲ್ಯ, ಸುಧಾಕರ ಕೋಟ್ಯಾನ್, ಅನಿತಾ, ಮಾಲಿನಿ ಶೆಟ್ಟಿ ಸಾಣೂರು, ನಾಸೀರ್, ಅಸ್ಲಾಂ, ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.ಶುಭದ ರಾವ್ ಸ್ವಾಗತಿಸಿದರು. ಬಿಪಿನ್ಚಂದ್ರಪಾಲ್ ನಕ್ರೆ ಪ್ರಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ, ಧನ್ಯವಾದವಿತ್ತರು.