ಮಂಗಳೂರು, ಆ 09 (DaijiworldNews/HR): ಜಿಲ್ಲೆಯಲ್ಲಿ ಮಕ್ಕಳಿಗೆ ವೈರಲ್ ಜ್ವರ ಮತ್ತು ದೇಹದ ಮೇಲೆ ಗುಳ್ಳೆಗಳು ಜಾಸ್ತಿ ಕಂಡುಬರುತ್ತಿದ್ದು, ಮಕ್ಕಳು ಗುಣಮುಖವಾಗುವವರೆಗೆ ಮನೆಯಲ್ಲೇ ಇರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಸಲಹೆ ನೀಡಿದ್ದಾರೆ
ಈ ಕುರಿತು ಮಾಹಿತಿ ನೀಡಿರುವ ಅವರು, ವೈರಲ್ ಜ್ವರ ಮತ್ತು ದೇಹದ ಮೇಲೆ ಗುಳ್ಳೆಗಳು ಸಾಂಕ್ರಾಮಿಕವಾಗಿರುವುದರಿಂದ ಮಕ್ಕಳು ಶಾಲೆಗೆ ಬರದಂತೆ ನೋಡಿಕೊಳ್ಳಬೇಕು. ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ ಕೆಲವು ದಿನಗಳಲ್ಲಿ ಗುಣವಾಗುತ್ತದೆ. ಹಾಗಾಗಿ ಗಾಬರಿಪಡುವ ಆವಶ್ಯಕತೆ ಇಲ್ಲ ಎಂದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ ಅಂತ್ಯದವರೆಗೆ ಒಟ್ಟು 203 ಡೆಂಘಿ ಪ್ರಕರಣಗಳು ವರದಿಯಾಗಿದ್ದು, 93 ಮಲೇರಿಯಾ ಪ್ರಕರಣಗಳು ಕೂಡ ವರದಿಯಾಗಿದೆ.