ಉಡುಪಿ, ಆ 09 (DaijiworldNews/HR): ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇಂದ್ರಾಳಿಯ ರೈಲ್ವೇ ಹಳಿಯ ಬಳಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಬ್ರಹ್ಮಾವರದ ಸುರೇಶ್(43) ಎಂದು ಗುರುತಿಸಲಾಗಿದೆ.
ಸುರೇಶ್ ಅವರು ಆಗಸ್ಟ್ 4ರಂದು ಕೆಲಸಕ್ಕೆಂದು ಮಲ್ಪೆಗೆ ಹೋಗಿದ್ದು, ಆ. 7ರಂದು ಮನೆಗೆ ಕರೆ ಮಾಡಿ ಮಾತನಾಡಿದ್ದರು. ಆ. 8ರಂದು ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಸಾವನ್ನಪ್ಪಿದ ವಿಚಾರ ತಿಳಿದುಬಂದಿದೆ.
ಇನ್ನು ಇಂದ್ರಾಳಿ ರೈಲು ಹಳಿಯ ಬಳಿ ಗಾಯಗೊಂಡು ಬಿದ್ದಿರುವ ಬಗ್ಗೆ ರೈಲ್ವೇ ಅಧಿಕಾರಿಗಳಿಂದ ಮಾಹಿತಿ ತಿಳಿದು ಪತ್ನಿ ಹಾಗೂ ಸಂಬಂಧಿಕರು ಸ್ಥಳಕ್ಕೆ ಹೋಗಿ ನೋಡಿದಾಗ ಸುರೇಶ ಅವರ ಹಣೆ, ತಲೆ, ಕಾಲುಗಳಿಗೆ ತೀವ್ರವಾದ ಗಾಯವಾಗಿ ಮೃತಪಟ್ಟಿದ್ದಾರೆ.
ಮಂಗಳೂರು-ಕುಂದಾಪುರ ರೈಲು ಹಳಿಯಲ್ಲಿ ನಡೆದುಕೊಂಡು ಬಾಕೂರು ಕಡೆಗೆ ಬರುತ್ತಿರುವಾಗ ಯಾವುದೋ ರೈಲು ಢಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.