ಉಡುಪಿ, ಆ 08 (DaijiworldNews/HR): ಶ್ರೀ ಕೃಷ್ಣಾಷ್ಟಮಿ ಎಂದರೆ ಮೊದಲು ನೆನಪಿಗೆ ಬರುವುದೇ ಉಡುಪಿ, ಉಡುಪಿ ಶ್ರೀಕೃಷ್ಣ ಮಠದ ಸುತ್ತಲೂ ಇರುವ ಅಷ್ಟಮಠಗಳು. ಈ ಶುಭದಿನದಂದು ಕೃಷ್ಣನ ದಿವ್ಯ ಆವಿರ್ಭಾವವನ್ನು ಇಡೀ ಲೋಕವೇ ಆಚರಿಸುತ್ತದೆ. ಶ್ರೀ ಕೃಷ್ಣಾಷ್ಟಮಿಯನ್ನು ಗೋಕುಲಾಷ್ಟಮಿ ಎಂತಲೂ ಕರೆಯುತ್ತಾರೆ. ಈ ವರ್ಷದ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 18 ರಂದು ಆಚರಿಸಲಾಗುತ್ತದೆ.
ಅಷ್ಟಮಿ ಎಂದಾಕ್ಷಣ ನೆನಪಾಗುವುದೇ ಕೃಷ್ಣ ಮಠದ ರಥಬೀದಿಯಲ್ಲಿ ನಡೆಯುವ ಮೊಸರು ಕುಡಿಕೆ, ವಿಟ್ಲಪಿಂಡಿ ಆಚರಣೆಗಳು. ಅಲ್ಲದೆ ಕೃಷ್ಣನ ಬಾಲ್ಯದ ಲೀಲೆಗಳನ್ನು ಪ್ರದರ್ಶಿಸುವ ಮುದ್ದು ಮುದ್ದಾಗಿ ಶ್ರೀ ಕೃಷ್ಣಾ ವೇಷ ಧರಿಸಿದ ಪುಟ್ಟ ಕಂದಮ್ಮಗಳು, ಷ್ಣು ದೇವರ ಇನ್ನೊಂದು ರೂಪವೇ ಕೃಷ್ಣ, . ಪ್ರತಿ ತಾಯಿಯು ತನ್ನ ಮಗುವಿನಲ್ಲಿ ಕೃಷ್ಣನ ರೂಪವನ್ನು ಕಾಣುತ್ತಾಳೆ. ಮಕ್ಕಳ ತುಂಟಾಟಗಳು ಯಾರಿಗೆ ಇಷ್ಟ ಆಗಲ್ಲ !! ಅವರನ್ನು ನೋಡುವುದೇ ಒಂದು ರೀತಿ ಮನಸ್ಸಿಗೆ ಮುದ ನೀಡುತ್ತದೆ. ಅದೆಷ್ಟೋ ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ಕೃಷ್ಣ ನಂತೆ ವೇಷ ಧರಿಸಿ ಪೋಟೋ ತೆಗಿಸಿಕೊಂಡು ಸಂತೋಷ ಪಡುತ್ತಾರೆ. ಅದೇ ರೀತಿ ಮುದ್ದು ಕೃಷ್ಣ ಬಾಲಲೀಲೆಗಳನ್ನು ನಿಮ್ಮ ಮಕ್ಕಳ ಜೊತೆಗೆ ವೇಷ ಧರಿಸಿ ಆ ನೆನಪುಗಳನ್ನು ಹಸಿರಾಗಿಸಲು ದಾಯ್ಜಿವರ್ಲ್ಡ್ ನಿಮಗೆ ಒಂದು ಉತ್ತಮ ಅವಕಾಶ ನೀಡುತ್ತಿದೆ.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಾಯ್ಜಿವರ್ಲ್ಡ್ ಉಡುಪಿ ನ್ಯೂಸ್ ಬ್ಯುರೋ ನಿಮಗೋಸ್ಕರ ಪ್ರಸ್ತುತ ಪಡಿಸುತ್ತಿದೆ. ತನಿಷ್ಕ್ ಜ್ಯುವೆಲ್ಲರ್ಸ್ ಅರ್ಪಿಸುವ “ಯಶೋನಂದಲಾಲ ಛಾಯಾಚಿತ್ರ ಸ್ಪರ್ಧೆ”- 2022 ಆಯೋಜಿಸುತ್ತಿದೆ.
ನಿಯಮಗಳು ಹಾಗೂ ಷರತ್ತುಗಳು :
• ಎಡಿಟ್ ಮಾಡಿದ ಮತ್ತು ವಾಟರ್ಮಾರ್ಕ್ ಬಳಸಿದ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
• ಛಾಯಾಚಿತ್ರಗಳು ಸ್ವಾಭಾವಿಕವಾಗಿದ್ದು, ಇತ್ತೀಚಿಗೆ ತೆಗೆದ ಛಾಯಾಚಿತ್ರವಾಗಿರಬೇಕು.
• ಛಾಯಾಚಿತ್ರದ ಗುಣಮಟ್ಟ ಉತ್ತಮವಾಗಿರಬೇಕು.
• 4 ವರ್ಷದ ವರೆಗಿನ ಮಕ್ಕಳಿಗೆ ಮಾತ್ರ ಅವಕಾಶ. (ಆಗಸ್ಟ್ 21, 2022 ರ ಒಳಗಿನ)
• ತಾಯಿಯ ವಯಸ್ಸು 22 ವರ್ಷ ಮೇಲ್ಪಟ್ಟಿರಬೇಕು.
• ಯಶೋದಾ-ಕೃಷ್ಣ ವೇಷದ 3 ಭಂಗಿಯ 3 ಛಾಯಾಚಿತ್ರಗಳನ್ನು ನಮಗೆ ಕಳುಹಿಸಿ. (ತಾಯಿ ಮಗು ಮಾತ್ರ ಜೊತೆಯಲ್ಲಿರಬೇಕು)
• ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ ಮತ್ತು ತಾಯಿಯ ಗುರುತಿನ ಚೀಟಿ ಲಗತ್ತಿಸಬೇಕು.
• ಛಾಯಾಚಿತ್ರಗಳೊಂದಿಗೆ ಹೆತ್ತವರ ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ಇರತಕ್ಕದ್ದು.
• ತೀರ್ಪುಗಾರರ ತೀರ್ಮಾನವೇ ಅಂತಿಮ.
• ಸ್ಪರ್ಧೆಯು 2 ವಿಭಾಗಗಳಲ್ಲಿ ನಡೆಯಲಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿಜೇತರನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು.
• ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ : ಆಗಸ್ಟ್ 21, 2022
• ಕೊನೆಯ ದಿನಾಂಕದ ನಂತರ ಬಂದ ಛಾಯಾಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.
• ಎರಡು ವಿಭಾಗಗಳಲ್ಲಿ ಆಯ್ಕೆಯಾದ ಟಾಪ್ 20 ಸ್ಪರ್ಧಾರ್ಥಿಗಳಿಗೆ ತನಿಷ್ಕ್ ಜ್ಯುವೆಲ್ಲರ್ಸ್ ವತಿಯಿಂದ ಫೋಟೋ ಶೂಟ್ ನಡೆಸಲಾಗುವುದು.
ಎರಡು ವಿಭಾಗಗಳಲ್ಲಿ ನಡೆಯುವ "ಯಶೋನಂದಲಾಲ ಛಾಯಾಚಿತ್ರ ಸ್ಪರ್ಧೆ"ಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ 5000 ನಗದು ಬಹುಮಾನದ ಜೊತೆಗೆ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದವರಿಗೆ ರೂ 3000 ನಗದು ಬಹುಮಾನ, ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇನ್ನು ತೃತೀಯ ಸ್ಥಾನ ಗಳಿಸಿದವರಿಗೆ, ರೂ 2000 ನಗದು ಬಹುಮಾನದ ಜೊತೆಗೆ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಅಲ್ಲದೆ ರೂ 1000 ಗಳ 3 ಸಮಾಧಾನಕರ ಬಹುಮಾನವನ್ನೂ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 73386 37688 / 83
+91 820 4295571
ನೋಂದಾವಣೆಗೆ ಭೇಟಿ ನೀಡಿ :-
www.daijiworldudupi.com/yk22