ಉಡುಪಿ, ಆ 08 (DaijiworldNews/MS): ನಗರದ ಸಿಟಿ ಬಸ್ ನಿಲ್ದಾಣದಲ್ಲಿ ತನ್ನ ಎರಡು ಪುಟ್ಟ ಮಕ್ಕಳೊಂದಿಗೆ ಕೌಟುಂಬಿಕ ಕಲಹದಿಂದ ಬೇಸತ್ತು ರೈಲು ಮುಖಾಂತರ ಎಲ್ಲಿಯಾದರೂ ಹೊರಟು ಹೋಗುತ್ತೇನೆ ಎಂದ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ ಘಟನೆ ಜುಲೈ 07ರ ರಾತ್ರಿ ನಡೆದಿದೆ.
ಮಹಿಳೆಯು ಮೂಲತಃ ಹೊರರಾಜ್ಯದವಳಾಗಿದ್ದು, ಗಂಡನೊಂದಿಗೆ ಮನಃಸ್ಥಾಪಗೊಂಡು ಬೇಸತ್ತು ನಗರ ಬಸ್ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗಲು ಕಣ್ಣೀರಿಡುತ್ತಿದಳು, ಬಸ್ ನಿರ್ವಾಹಕರೊಬ್ಬರಿಂದ ಮಾಹಿತಿ ಪಡೆದ ವಿಶು ಶೆಟ್ಟಿ, ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಿ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.
ರಕ್ಷಣಾ ಕಾರ್ಯದಲ್ಲಿ 112ಪೊಲೀಸ್ ಸಹಾಯ ದೊರಕಿದೆ, ಮಾಹಿತಿಯನ್ನು ನಗರ ಪೊಲೀಸ್ ಠಾಣೆಗೆ ನೀಡಲಾಗಿದೆ.
ಸಖಿ ಸೆಂಟರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಯೋಜನೆಯಾಗಿದ್ದು 24*7ರಂತೆ ನಿಟ್ಟೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ, ಯಾವುದೇ ಸಮಯದಲ್ಲಿ ಅಸಹಾಯಕತೆಗೆ ಒಳಗಾದ ಮಹಿಳೆಯರು ಸಖಿ ಸೆಂಟರನ್ನು ಸಂಪರ್ಕಿಸಿ ಸಮಾಲೋಚನೆ, ಕಾನೂನು ನೆರವು, ವಸತಿಯನ್ನು ಪಡೆಯಬಹುದು