ಉಡುಪಿ,ಜ 30 (MSP): ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದ ದೂರಿನ ಅನ್ವಯ ಮಣಿಪಾಲದಲ್ಲಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹತ್ತು ಜನರನ್ನು ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಕಾರ್ಕಳ ಪೊಲೀಸರು ದಾಳಿ ನಡೆಸಿ ಬಂಧಿಸಿರುತ್ತಾರೆ. ಮಣಿಪಾಲ ಬಳಿಯ 80 ಬಡಗುಬೆಟ್ಟು ಗ್ರಾಮದ ರಾಜೀವನಗರದ ಮನೆಯೊಂದರಲ್ಲಿ ಪಿಂಪ್ ಸಹಿತ ಹಲವರ ಬಂಧಿಸಿದ್ದಾರೆ.
ಈ ಹಿಂದೆ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ವಾದಿರಾಜ್ ಅಮೀನ್ ಯಾನೆ ವಾದಿ ಈಗ ತನ್ನ ಪತ್ನಿ ಯಿಂದ ವೇಶ್ಯಾವಾಟಿಕೆ ಅಡ್ಡೆ ಮನೆಯಲ್ಲಿಯೇ ನಡೆಸುತ್ತಿದ್ದನು. ಇದರಿಂದ ಈ ಭಾಗದ ಸಭ್ಯ ಮಹಿಳೆಯರು ಈ ಭಾಗದಲ್ಲಿ ಸಂಚರಿಸುವುದಕ್ಕೆ ಅಡಚಣೆಯಾಗುತ್ತಿತ್ತು ಈ ಬಗ್ಗೆ ಸ್ಥಳೀಯರು ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು ನೀಡಿದ್ದರು. ವೇಶ್ಯಾವಾಟಿಕೆ ಅಡ್ಡೆ ನಡೆಸುತ್ತಿದ್ದ ಮಾಹಿತಿ ಇದ್ದರೂ ದಾಳಿ ಮಾಡದೆ ಯಾವುದೇ ಕ್ರಮ ಕೈಗೊಳ್ಳಲು ಮಣಿಪಾಲ ಎಎಸ್ಐ ಮತ್ತು ಪೇದೆ ಅಮಾನತು ಮಾಡಲಾಗಿದೆ. ಮಣಿಪಾಲ ಠಾಣಾ ಎಎಸ್ಐ ಶೇಖರ್ ಮತ್ತು ಪೇದೆ ಸುರೇಶ್ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರ್ಗಿ
ಅಮಾನತು ಮಾಡಿದ್ದಾರೆ .
ಇಲ್ಲಿನ ಆಶಾ ಎಂಬುವವರಿಗೆ ಸೇರಿದ ಮನೆಗೆ ಸೋಮವಾರ ರಾತ್ರಿ ಸುಮಾರು 7:3 ವೇಳೆ ದಾಳಿ ನಡೆಸಿದ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳಾದ ಆಶಾ (35),ಆರೂರು ಹೆಬ್ಬಾರಬೆಟ್ಟುನ ಮಹೇಶ ಭಟ್ (26) ದೀಪಕ್ (30), ವಿನಯ್ (28) ಸತೀಶ (30) ಪುನೀತ್ (29) ಸಚಿನ್ (32) ದಿನೇಶ (30), ಅರುಣ್ (25), ತಮಿಳುನಾಡಿನ ಕಾರ್ತಿಕ್ (37) ಎಂಬವರನ್ನು ಬಂಧಿಸಲಾಗಿದೆ.
ದಾಳಿ ಸಂದರ್ಭದಲ್ಲಿ 65,250 ನಗದು, ಮೊಬೈಲ್ ಪೋನ್ಗಳು-11, ಬೆಡ್ ಶೀಟ್-6, ವಾಹನ-5 ಹಾಗೂ ವೇಶ್ಯಾವಾಟಿಕೆ ಬಳಸುತ್ತಿದ್ದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.