ಕಾರ್ಕಳ, ಆ 08 (DaijiworldNews/MS):ವೀರಪ್ಪ ಮೊಯಿಲಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಅವಧಿಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜರೋಹಣ ನೆರವೇರಿಸಲು ಮುಂದಾದ ದೇಶ ಭಕ್ತರ ಮೇಲೆ ಗುಂಡು ಹಾರಾಟ ನಡೆದಿತ್ತು. ಈ ಘಟನಾವಳಿಯನ್ನು ಮರೆತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರು ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಸವಿನೆನಪಿನ ಅಮೃತ ಮಹೋತ್ಸವ ಸಂಭ್ರಮದ ಹೊತ್ತು ಕಾಂಗ್ರೆಸ್ ಕಾಲ್ನಡಿಗೆ ಜಾಥ ನಡೆಸಿ ಬಿಜೆಪಿಯನ್ನು ಟೀಕಿಸುತ್ತಿರುವುದು ಆ ಪಕ್ಷದ ಮುಖಂಡರ ಲೇವಡಿತನವಾಗಿದೆ ಜಗಜಾಹೀರುಗೊಂಡಿದೆ ಎಂದು ಎಂದು ಇಂಧನ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ಕುಮಾರ್ ಆರೋಪಿಸಿದರು.
ಕಾರ್ಕಳದಲ್ಲಿ ಅಮೃತಮಹೋತ್ಸವ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಇಂದು ಬಿಜೆಪಿಯ ಸರ್ವಾಂಗೀಣ ಆಡಳಿತವನ್ನು ಪ್ರಶ್ನಿಸುತ್ತಿದೆ. ಕಾಂಗ್ರೆಸ್ ಇಷ್ಟು ವರ್ಷ ಯಾವ ರೀತಿ ಆಳ್ವಿಕೆ ಮಾಡಿತ್ತು. ಕಾಂಗ್ರೆಸ್ಗೆ ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ. ಸಂವಿಧಾನವನ್ನು ಮನಸ್ಸಿಗೆ ಬಂದಂತೆ ತಿದ್ದುಪಡಿ ಮಾಡಿ ಅಗೌರವ ಕೊಡುತ್ತ ಬಂದಿದೆ. ಅಮೃತ ಮಹೋತ್ಸವವನ್ನು ಸಂಭ್ರಮ ಮಾಡುವಂತ ಕಾಲದಲ್ಲಿ ಕಾಂಗ್ರೆಸ್ಸು ಟೀಕೆಯಲ್ಲಿ ತೊಡಗಿದೆ. ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಸಾಕಷ್ಟು ಟೀಕೆಗಳನ್ನು ಮಾಡುತ್ತ ಬಂದಿದ್ದರೂ ಯಾವುದೇ ವೇದಿಕೆಗಳನ್ನು ಟೀಕೆಗೆ ಬಳಸಿಕೊಂಡಿಲ್ಲ. ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಅನಗತ್ಯ ಟೀಕೆ ಮಾಡುತ್ತ ಬರುತ್ತಿದೆ ಎಂದು ನೇರ ವಾಗ್ದಾಳಿ ನಡೆಸಿದರು.
ಕಾರ್ಕಳದಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಮಾರ್ಪಡಿ ವೀರಪ್ಪ ಮೊಯಿಲಿಯವರು ಶಪಥ ಮಾಡಿದ್ದಾರೆ. ವೀರಪ್ಪ ಮೊಯಿಲಿ ಅವರು ಶಾಸಕರಾಗಿ ೬ ಬಾರಿ ಆಯ್ಕೆಗೊಂಡಿದ್ದು, ಮಾತ್ರವಲ್ಲದೇ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ್ದರು. ಅವರ ಮಾಡದಂತಹ ಅಭಿವೃದ್ಧಿ ಸತ್ಕಾರ್ಯಗಳು ಇದೀಗ ಅದೇ ಕಾರ್ಕಳ ಕ್ಷೇತ್ರದಲ್ಲಿ ನಾಗಲೋಟದಲ್ಲಿ ನಡೆಯುತ್ತಾ ಬಂದಿರುವುದು ಅವರಿಗೆ ಸಹಿಸಿಕೊಳ್ಳಲಾಗದಂತಹ ದಿಶೆಗಳು ಎದುರಾಗಿದೆ ಎಂದು ತಿರುಗೇಟು ನೀಡಿದರು.
ದೇಶದ ಪಾಲಿಗೆ ಕಾಂಗ್ರೆಸ್ ಮುಳುವು
ಸ್ವಾತಂತ್ರ್ಯ ಬಂದ ನಂತರ 3 ಯುದ್ಧಗಳು ಸಂಭವಿಸಿವೆ. 3 ಯುದ್ಧ ನಡೆದಾಗ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಎಲ್ಲ ಯುದ್ಧದದಲ್ಲಿ ಸೋಲುಂಡು ಭೂಮಿ ಕಳೆದುಕೊಂಡೆವು. ಕಾಂಗ್ರೆಸ್ಗೆ ದೇಶದ ಬಗ್ಗೆ ರಾಷ್ಟ್ರ ಧ್ವಜದ ಬಗ್ಗೆ ಗೌರವವೇ ಇಲ್ಲ. ಬಿಜೆಪಿ ಅಧಿಕಾರಲ್ಲಿ ಇದ್ದಾಗ ಕಾರ್ಗಿಲ್ ಹೋರಾಟ ನಡೆಯಿತು. ಒಂದಿಂಚು ಭೂಮಿಯನ್ನು ಬಿಟ್ಟು ಕೊಟ್ಟಿಲ್ಲ ಬಿಜೆಪಿಯ ರಾಷ್ಟ್ರ ಪ್ರೇಮ, ರಾಷ್ಟೃ ಧ್ವಜದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಸ್ವಾತಂತ್ರ್ಯ ಬಂದ ನಂತರ ನಕಲಿ ಗಾಂಧಿ ಕುಟುಂಬಕ್ಕೆ ದೇಶವನ್ನು ಅಡವಿಟ್ಟವರು ಕಾಂಗ್ರೆಸ್ಸಿಗರು. ಅಮೃತ ಮಹೋತ್ಸವವನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ಇವತ್ತು ಮೌನ ಬಿಟ್ಟು ಮಾತನಾಡಬೇಕಾಯಿತು ಎಂದು ಹರಿಹಾಯ್ದರು.
ಸುಳ್ಯದಲ್ಲಿ ರೈತರ ಚಳುವಳಿ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು ಸುಳ್ಯದಲ್ಲಿ ರೈತ ಚಳವಳಿ ನಡೆದು ೧೨ ದಿನಗಳ ಕಾಲ ಮಂಗಳೂರು ಸ್ವತಂತ್ರ್ಯವಾಗಿತ್ತು. ಅದಕ್ಕಿಂತ ೫೦೦ ವರ್ಷಗಳ ಹಿಂದೆ ವೀರರಾಣಿ ಅಬ್ಬಕ್ಕ ಸಂಗ್ರಾಮದ ಕಹಳೆ ಮೊಳಗಿದಿದ್ದರು. ಕುಂದಾಪುರದ ಬಸ್ರೂರುರಿನಲ್ಲೂ ಹೋರಾಟಗಳು ನಡೆದಿದ್ದವು. ಅವಿಭಜಿತ ಜಿಲ್ಲೆಯ ಹಿರಿಯರು ಸಂಗ್ರಾಮಕ್ಕೆ ಅಡಿಗಲ್ಲು ಹಾಕಿದವರು ಎಂದು ಸಚಿವರು ಹೇಳಿದರು.
ಹಾರಿಸಿ ರಾಷ್ಟ್ರಧ್ವಜವನ
ತಾಲೂಕಿನಲ್ಲಿ ಸುಮಾರು 50 ಸಾವಿರ ಮನೆಗಳಿದ್ದು, 60ರಿಂದ 7 ಸಾವಿರ ಅಂಗಡಿ ಮಂಗಟ್ಟುಗಳಿವೆ. ಎಲ್ಲ ಮನೆ, ಅಂಗಡಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.ಬಿಜೆಪಿ ಕಾರ್ಯಕರ್ತರು ಜನಪ್ರತಿನಿಧಿಗಳು ಆ.೯ಮತ್ತು 10 ರಂದು ತಿರಂಗ ಧ್ವಜ ಹಾರಿಸಬೇಕು. ಆ.೧೩ರಿಂದ ಸಾರ್ವಜನಿಕವಾಗಿ ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಬೇಕು. ಕುಟುಂಬ ಸಮೇತರಾಗಿ ದೇಶಪ್ರೇಮದಿಂದ ಶುಭ್ರ ಬಟ್ಟೆ ಧರಿಸಿ, ರಾಷ್ಟ್ರ ಧ್ವಜಕ್ಕೆ ಅವಮಾನ ಆಗದ ರೀತಿಯಲ್ಲಿ ತಿರಂಗ ಹಾರಿಸಬೇಕು. ಮನೆ ಮುಂದೆ ರಂಗೋಲಿಗಳನ್ನು ಬಿಡಿಸಿ, ಸಿಹಿ ಹಂಚಿ ಹಬ್ಬದ ರೀತಿ ಎಲ್ಲರೂ ಸೇರಿ ಆಚರಿಸುವಂತೆ ಅವರು ಕರೆ ನೀಡಿದರು. ಧ್ವಜ ಖರೀದಿಸಿ ತರಬೇಕು. ಎಲ್ಲದಕ್ಕೂ ಪೂರ್ವ ನಿಶ್ಚಿತ ತಯಾರಿಗಳನ್ನು ನಡೆಸಿಕೊಳ್ಳಬೇಕು. ಯಾವೊಂದು ಮನೆಯೂ ಬಾಕಿಯಾಗದಂತೆ ತ್ರಿವರ್ಣ ಧ್ವಜಾ ಹಾರಾಡುವ ಮೂಲಕ ಕಾರ್ಕಳ ಇತಿಹಾಸದ ಪುಟಗಳಲ್ಲಿ ಸೇರಬೇಕು ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಸ್ತಾವನೆಗೈದರು. ಗೇರು ಅಭಿವ್ರದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹಿರಿಯರಾದ ಎಂ.ಕೆ ವಿಜಯಕುಮಾರ್ ಮಾತನಾಡಿದರು. ಜಿ ಕಾರ್ಯದರ್ಶಿಗಳಾದ ರವೀಂದ್ರ ಮಡಿವಾಳ, ರೇಶ್ಮಾ ಉದಯ್ ಶೆಟ್ಟಿ, ಯುವ ಮೋರ್ಚಾ ಜಿಧ್ಯಕ್ಷ ವಿಖ್ಯಾತ್ ಶೆಟ್ಟಿ, ತಾಲೂಕು ಮಂಡಲ ಪ್ರ.ಕಾರ್ಯದರ್ಶಿ ಜಯರಾಮ್ ಸಾಲ್ಯಾನ್ ವೇದಿಕೆಯಲ್ಲಿದ್ದರು. ಬಿಜೆಪಿ ಪ್ರ. ಕಾರ್ಯದರ್ಶಿ ನವೀನ್ ನಾಯಕ್ ಸ್ವಾಗತಿಸಿದರು. ಜ್ಯೋತಿ ವಂದೆ ಮಾತರಂ ಹಾಡಿದರು. ಸುಹಾಸ್ ಶೆಟ್ಟಿ ನಿರೂಪಿಸಿದರು.