ಕಾರ್ಕಳ, ಆ 07 (DaijiworldNews/SM): ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಗೊಳ್ಳಲು ಸನಾತನ ಹಿಂದು ಧರ್ಮದ ಸಂಸ್ಕೃತಿ, ಸಂಸ್ಕಾರ ಕಾರಣವಾಗಿದೆ. ವಿದೇಶಿಗಳ ಅತಿಕ್ರಮಣವು ಭಾರತೀಯರಲ್ಲಿ ತಲ್ಲಣವನ್ನು ಉಂಟುಮಾಡಿದರೂ, ಅದನ್ನು ಎದುರಿಸುವ ಶಕ್ತಿಯು ನಮ್ಮಲಿದೆ ಎಂದು ಬಜರಂಗದಳದ ಪ್ರಾಂತ್ಯ ಸಂಚಾಲಕ ಸುನೀಲ್ ಕೆ.ಆರ್. ಹೇಳಿದರು.
ಕಾರ್ಕಳ ನಗರದ ಕರಿಯಕಲ್ಲಿನ ಕಜೆ ಎಂಬಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ಕಾರ್ಕಳ ನಗರದ ವತಿಯಿಂದ ನೂತನ ಧ್ವಜಕಟ್ಟೆ ಉದ್ಘಾಟನೆಗೈದು ಮಾತನಾಡಿದರು.
ಪ್ರಮುಖರಾದ ಸುಧಾಕರ್ ಶೆಟ್ಟಿ, ಉದ್ಯಮಿಗಳಾದ ಜಯ ಪ್ರಕಾಶ್ ದೇವಾಡಿಗ, ಪ್ರಕಾಶ್ ರಾವ್,ಸುಧೀರ್ ನಿಟ್ಟೆ ಜಿಲ್ಲಾ ಸಹ ಕಾರ್ಯದರ್ಶಿ, ಪ್ರಸಾದ್ ನಿಟ್ಟೆ ತಾಲೂಕು ಕಾರ್ಯದರ್ಶಿ, ಮನೋಜ್ ಕರಿಯಕಲ್ಲು ತಾಲೂಕು ಸಂಚಾಲಕರು, ಅವಿನಾಶ್ ಭಟ್ ಸಹ ಸಂಚಾಲಕರು, ರಾಘವೇಂದ್ರ ಬಜಗೋಳಿ ತಾಲೂಕು ಗೋರಕ್ಷಾ ಪ್ರಮುಖ್,ಪ್ರಣಯ್ ನಿಟ್ಟೆ ತಾಲೂಕು ಸುರಕ್ಷಾ ಪ್ರಮುಖ್,ಸಂತೋಷ್ ನಗರ ಸಂಚಾಲಕರು, ಹಾಗೂ ಪ್ರಮುಖ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ನಗರ ಸಹಸಂಚಾಲಕ ಸಂಪತ್ ಸ್ವಾಗತಿಸಿದರು. ಸುಮಂತ್ ವಂದಿಸಿದರು.