ಮಂಗಳೂರು, ಆ 07 (DaijiworldNews/SM): ಇಲ್ಲಿನ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಯುಂಟುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಜ್ಪೆ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮನ್ಸೂರ್ ಅದ್ಯಪಾಡಿ(41), ಆತನ ಪತ್ನಿ ಅಸ್ಮತಾ ಬಂಧಿತರು. ಬಂಧನ ವಾರೆಂಟ್ ನಿಮಿತ್ತ ಪೊಲೀಸರು ತೆರಳಿದ್ದರು. ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಆರೋಪಿ ಮನ್ಸೂರು ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳಿವೆ. ಬಜ್ಪೆ ಠಾಣೆಯಲ್ಲಿ 6, ಮಡಿಕೇರಿ ಠಾಣೆಯಲ್ಲಿ 1, ತಿಪಟೂರು ಹುಳಿಯಾಲ ಠಾಣೆಯಲ್ಲಿ 1, ಕುಶಾಲನಗರ ಠಾಣೆಯಲ್ಲಿ 3, ಸಕಲೇಶಪುರ ಅರೆಹಳ್ಳಿ ಠಾಣೆಯಲ್ಲಿ 1, ಅಜಿಕಾರು ಠಾಣೆಯಲ್ಲಿ 1, ಕಾರ್ಕಳ ಠಾಣೆಯಲ್ಲಿ 1, ಸೋಮವಾರ ಪೇಟೆ ಠಾಣೆಯಲ್ಲಿ 3, ಕಾವೂರು ಠಾಣೆಯಲ್ಲಿ 1, ಸುರತ್ಕಲ್ ಠಾಣೆಯಲ್ಲಿ 2, ಮೂಡುಬಿದಿರೆ ಠಾಣೆಯಲ್ಲಿ 4 ಸೇರಿದಂತೆ 24ಕ್ಕಿಂತಲೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಬಂಧನ ವಾರಂಟ್ ಗೆ ಸಂಬಂಧಿಸಿದಂತೆ ಮೂಡುಬಿದಿರೆ ಹಾಗೂ ಬಜ್ಪೆ ಠಾಣಾ ಪೊಲೀಸರು ಮೊಹಮ್ಮದ್ ಮನ್ಸೂರ್ ನ ಬಂಧನಕ್ಕೆ ಅದ್ಯಪಾಡಿಯಲ್ಲಿನ ಆತನ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ಮನ್ಸೂರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಲ್ಲದೆ ಆತನ ಪತ್ನಿ ಹಾಗೂ ಮನೆಯ ಇತರ ಸದಸ್ಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿ ಮೊಹಮ್ಮದ್ ಮನ್ನೂರ್ ಹಾಗೂ ಆತನ ಪತ್ನಿ ಅಸ್ಮತಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.