ಮಂಗಳೂರು, ಆ 07 (DaijiworldNews/SM): ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಹಾಗೂ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣದ ಬಳಿಕ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಮತ್ತೆ ಮುಂದುವರೆಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಜಾರಿಯಲ್ಲಿರುವ ಸೆಕ್ಷನ್ 144 ಅನ್ನು ಆಗಸ್ಟ್ 14ರ ತನಕ ಮುಂದುವರೆಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಗುಂಪು ಸೇರುವುದು, ಸಾರ್ವಜನಿಕವಾಗಿ ಸಮಾರಂಭ, ಸಭೆಗಳನ್ನು ನಡೆಸುವುದಕ್ಕೆ ಅವಕಾಶವಿಲ್ಲ.
ಘೋಷಣೆಗಳನ್ನು ಕೂಗುವುದು, ಅಹಿತಕರ ಘಟನೆಗಳಿಗೆ ಕೈ ಹಾಕುವುದು, ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ. ಶಸ್ತ್ರಗಳು, ಮಾರಕಾಯುಧಗಳು, ದೊಣ್ಣೆ ಸೇರಿದಂತೆ ಇತರ ಪರಿಕರಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.