ಮಂಗಳೂರು, ಆ 07 (DaijiworldNews/SM): ದ.ಕ ಜಿಲ್ಲೆಯಲ್ಲಿ ಅಪರಾಧ ಕೃತ್ಯ ನಡೆದ ಹಿನ್ನೆಲೆಯಲ್ಲಿ ಕೆಲವೊಂದು ನಿರ್ಬಂಧ ಹೇರಲಾಗಿತ್ತು. ಸದ್ಯ ನಿರ್ಬಂಧಗಳನ್ನು ತೆರೆಯಲು ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಾತ್ರಿ 9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಆದರೆ ನಾಳೆಯಿಂದ ರಾತ್ರಿ 9 ಗಂಟೆಯ ನಂತರವು ಅಂಗಡಿಗಳನ್ನು ಓಪನ್ ಇಡಬಹುದು. ಬಾರ್, ವೈನ್ ಶಾಪ್ ಎಂದಿನಂತೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಜನರ ಓಡಾಟಕ್ಕೂ ಕೂಡ ಯಾವುದೇ ನಿರ್ಬಂಧವಿರುವುದಿಲ್ಲ. ಆಗಸ್ಟ್ 14 ರ ತನಕ 144 ಸೆಕ್ಷನ್ ಜಾರಿಯಲ್ಲಿರುತ್ತೆ ಎಂದು ದ.ಕಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.