ಕುಂದಾಪುರ, ಆ 07 (DaijiworldNews/HR): ಇಂಗ್ಲೆಂಡ್ನ ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆ 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ವಿಜೇತ ಗುರುರಾಜ ಪೂಜಾರಿ ಜೆಡ್ಡು ಹುಟ್ಟೂರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಉಡುಪಿ ಜಿಲ್ಲಾಡಳಿತದ ವತಿಯಿಂದ ಗೌರವ ಸಲ್ಲಿಸಲಾಯಿತು. ಕುಂದಾಪುರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕುಂದಾಪುರದ ನ್ಯೂ ಹಕ್ರ್ಯೂಲಸ್ ಜಿಮ್ & ಫಿಟ್ ನೆಸ್ ಸೆಂಟರ್ನಲ್ಲಿ ಗುರುರಾಜ ಪೂಜಾರಿಯವರನ್ನು ಅಭಿನಂದಿಸಲಾಯಿತು. ಬಳಿಕ ಪೊಲೀಸ್ ಇಲಾಖೆಯಿಂದ ಗೌರವಿಸಲಾಯಿತು. ನಂತರ ವೈಭವದ ಮೆರವಣಿಗೆ ಹುಟ್ಟೂರು ಚಿತ್ತೂರು ಗ್ರಾಮದ ವಂಡ್ಸೆ ಸಮೀಪದ ಜೆಡ್ಡುವಿನತ್ತ ತೆರಳಿತು.
ಇನ್ನು ತಲ್ಲೂರಿನಲ್ಲಿ ಗುರುರಾಜ್ ಪೂಜಾರಿಯವರನ್ನು ಸನ್ಮಾನಿಸಲಾಯಿತು, ಕಟ್ಬೇಲ್ತೂರಿನಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ನೆಂಪು ಸರ್ಕಲ್ನಲ್ಲಿ ಸ್ವಾಗತ ಸನ್ಮಾನ ನಡೆಯಿತು. ಬಳಿಕ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ನಿವಾಸದಲ್ಲಿ ಗುರುರಾಜ ಪೂಜಾರಿಯವರನ್ನು ಶಾಸಕರು ಸನ್ಮಾನಿಸಿದರು. ನಂತರ ವಂಡ್ಸೆಯಲ್ಲಿ ಸನ್ಮಾನಿಸಲಾಯಿತು. ವಂಡ್ಸೆ ಮೇಲ್ಪೇಟೆ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು. ಬಳಿಕ ಕೊಲ್ಲೂರಿಗೆ ತೆರಳಿ ಪೂಜೆ ಸಲ್ಲಿಸಿದರು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಅವರು ಮನೆಗೆ ಆಗಮಿಸಿದರು. ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಮಾರ್ಗದುದ್ದಕ್ಕೂ ಸಂಘ ಸಂಸ್ಥೆಗಳು, ಸಾರ್ವಜನಿಕರು ಸನ್ಮಾನ, ಅಭಿನಂದನೆ ಸಲ್ಲಿಸಿದರು.