ಮಂಗಳೂರು, ಜ 29(SM): ಪರ್ಸಿನ್ ಮೀನುಗಾರಿಕಾ ಬೋಟುಗಳು ಲೈಟ್ ಉಪಯೋಗಿಸಿ ಫಿಶಿಂಗ್ ಮತ್ತು ಟ್ರಾಲ್ ಬೋಟ್, ಬುಲ್ ಟ್ರಾಲ್ ಫಿಶಿಂಗ್ ನಡೆಸುತ್ತಿದ್ದು ಇದನ್ನು ನಿಷೇಧಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘದಿಂದ ಪ್ರತಿಭಟನೆ ನಡೆಯಿತು.
ಪರ್ಸಿನ್ ಮೀನುಗಾರಿಕಾ ಬೋಟ್ ನವರು ಲೈಟ್ ಉಪಯೋಗಿಸಿ ಮೀನುಗಾರಿಕೆ ನಡೆಸುವುದರಿಂದ ಮೀನುಗಳ ಸಂತತಿ ನಾಶವಾಗುತ್ತದೆ. ಅಲ್ಲದೇ ಇತರರಿಗೆ ಮೀನು ಸಿಗದೇ ಲಕ್ಷಾಂತರ ಮೀನುಗಾರರು ಬೀದಿಪಾಲಾಗುವಂತಾಗಿದ್ದಾರೆ.
ಲೈಟ್ ಫಿಶಿಂಗ್ ನಿಷೇಧಿಸಿ ಕೆಂದ್ರ ಸರಕಾರ ಆದೇಶಿಸಿದ್ದರೂ, ಆದೇಶ ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಲೈಟ್ ಫಿಶಿಂಗ್ ನಿಷೇಧಿಸಬೇಕೆಂದು ಆಗ್ರಹಿಸಿದರು.