ಉಡುಪಿ, ಆ 06 (DaijiworldNews/DB): 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ "ಭಾರತಕ್ಕಾಗಿ ನಡಿಗೆ" ಕಾಲ್ನಡಿಗೆ ಜಾಥಾ ಉಡುಪಿ ನಗರ ಭಾಗದಲ್ಲಿ ಶನಿವಾರ ನಡೆಯಿತು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಲ್ನಡಿಗೆಯು ಕನ್ನಾರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಿಂದ ಪ್ರಾರಂಭವಾಗಿ ಕಿನಿಮುಲ್ಕಿ ಮುಖ್ಯದ್ವಾರದ ಮೂಲಕ ಸಾಗಿ ಉಡುಪಿ ಜೋಡುರಸ್ತೆಯ ಮುಖಾಂತರ ಕೋರ್ಟ್ ರೋಡ್ ಮೂಲಕ ಸರ್ವಿಸ್ ಬಸ್ ನಿಲ್ದಾಣದ ಮೂಲಕ ಸಾಗಿ ಕಿದಿಯೂರು ಹೋಟೆಲ್ನ ಮೂಲಕ ಸಾಗಿ ಸಿಟಿ ಬಸ್ಸು ನಿಲ್ದಾಣದಿಂದ ಕಲ್ಸಂಕದ ಮೂಲಕ ಕಡಿಯಾಳಿಯಾಗಿ ಎಂಜಿಎಂ ಕಾಲೇಜಿನ ಮುಂಭಾಗದಿಂದ ಸಾಗಿ ಕೊನೆಗೆ ಇಂದ್ರಾಳಿ ಬಸ್ಸು ನಿಲ್ದಾಣ ಬಳಿ ಸಮಾರೋಪಗೊಂಡಿತು.
ಪಾದಯಾತ್ರೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ಎ. ಗಫೂರ್, ವರೋನಿಕಾ ಕರ್ನೆಲಿಯೋ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಶಬೀರ್ ಉಡುಪಿ, ತಾರನಾಥ್ ಕೋಟ್ಯಾನ್, ಸುಕನ್ಯ ಪೂಜಾರಿ, ಮಾಧವ ಬನ್ನಂಜೆ, ದಿನೇಶ್ ಪುತ್ರನ್, ಉದ್ಯಾವರ ನಾಗೇಶ್ ಕುಮಾರ್, ಲೂಯಿಸ್ ಲೋಬೊ, ಕೀರ್ತಿ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ದೀಪಕ್ ಕೋಟ್ಯಾನ್, ಅಣ್ಣಯ್ಯ ಶೇರಿಗಾರ್, ದಿನಕರ ಹೇರೂರು, ಗಣೇಶ್ ನೆರ್ಗಿ, ಹರೀಶ್ ಶೆಟ್ಟಿ ಪಾಂಗಳ, ಶಶಿಧರ್ ಶೆಟ್ಟಿ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಸಂಗ್ರಾಮದ ವೀರ-ಯೋಧರ ತ್ಯಾಗ, ಬಲಿದಾನ ಮತ್ತು ಶಾಂತಿ, ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶ ಸಾರುವ ಸಲುವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾದಂಗವಾಗಿ ಈ ಕಾರ್ಯಕ್ರಮ ನಡೆಯಿತು.