ನವದೆಹಲಿ,ಜ 29 (MSP): ಪಾಕಿಸ್ತಾನದದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹಿಂದೂ ಮಹಿಳೆಯೊಬ್ಬರು ನ್ಯಾಯಾಧೀಶರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಸುಮನ್ ಕುಮಾರಿ ಬೊದಿನಿ ಅವರು ನ್ಯಾಯಾಧೀಶೆಯಾಗಿ ಅಧಿಕಾರ ವಹಿಸಿಕೊಂಡಿದ್ದು ಶಹದಾದ್ಕೋಟ್ ಜಿಲ್ಲೆಯಲ್ಲಿ ತಮ್ಮ ಸೇವೆ ಸಲ್ಲಿಸಲಿದ್ದಾರೆ. ಪಾಕಿಸ್ಥಾನದ ಕಂಬರ್ - ಶಶಹದಾದ್ಕೋಟ್ ಜಿಲ್ಲೆಯ ಮೂಲದವರಾದ ಸುಮನ್ ಅವರು ಅದೇ ಜಿಲ್ಲೆಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ. ಹೈದರಾಬಾದ್ ನಲ್ಲಿ ಎಲ್ಎಲ್ ಬಿ ಪೂರ್ಣಗೊಳಿಸಿರುವ ಸುಮನ್ ಕುಮಾರಿ, ಕರಾಚಿಯ ಸ್ಜಬಿಸ್ಟ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂದೆ ಪವನ್ ಕುಮಾರ್ ಬೊದಾನಿ , ಮಗಳು ಸುಮನ್ ಅತ್ಯಂತ ಸವಾಲಿನ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಠಿಣ ಪರಿಶ್ರಮ ಹಾಗೂ ಪ್ರಮಾಣಿಕತೆಯಿಂದ ತನ್ನ ಸೇವಾ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರುತ್ತಾರೆ ಎಂಬ ಭರವಸೆ ಇದೆ. ಇದಲ್ಲದೆ ಮಗಳು ಸುಮನ್ ಗೆ ಹುಟ್ಟೂರ ಜಿಲ್ಲೆಯಲ್ಲಿನ ಬಡವರಿಗೆ ಉಚಿತ ಕಾನೂನು ನೆರವು ನೀಡುವಾಸೆ ಇದೆ ಎಂದಿದ್ದಾರೆ.
ಸುಮನ್ ಅವರ ತಂದೆ ಓರ್ವ ಕಣ್ಣಿನ ತಜ್ಞರಾಗಿದ್ದು, ಅವರ ಅಕ್ಕ ಸಾಫ್ಟ್ ವೇರ್ ಇಂಜಿನಿಯರ್; ಹಾಗೂ ಇನ್ನೊಬ್ಬ ಸಹೋದರಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಪಾಕಿಸ್ಥಾನದ ಇಸ್ಲಾಂ ಅತೀ ದೊಡ್ಡ ಧರ್ಮವಾಗಿದ್ದು, ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳು ಕೇವಲ ಶೇ.2ರಷ್ಟು ಇದ್ದಾರೆ.