ಬಂಟ್ವಾಳ, ಆ 04 (DaijiworldNews/DB): ದ.ಕ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಪೆರಾಜೆ ಗ್ರಾಮವನ್ನು ಹರ್ ಘರ್ ಜಲ್ (ಪ್ರತಿ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ) ಗ್ರಾಮವಾಗಿ ಘೋಷಣೆ ಮಾಡಲಾಗಿದೆ.
ಪೆರಾಜೆ ಗ್ರಾಮ ಪಂಚಾಯತಿನಲ್ಲಿ ಗುರುವಾರ ಹರ್ ಘರ್ ಜಲ್ ಗ್ರಾಮ ಘೋಷಣೆ ಕಾರ್ಯಕ್ರಮ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ರೋಹಿಣಿ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಲಜೀವನ್ ಮಿಷನ್ನ ಯೋಜನಾ ವ್ಯವಸ್ಥಾಪಕ ವಿಘ್ನೇಶ್ ರಾಜ್, ಎಂಜಿನಿಯರ್ ನಾಸೀರ್, ಜೆಜೆಎಮ್ ಅನುಷ್ಠಾನ ಬೆಂಬಲ ಸಂಸ್ಥೆಯ ಎಚ್ಆರ್ಡಿ ಚರಣ್ರಾಜ್, ಜೆಜೆಎಮ್ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮ್ಸ್ ನ ತಂಡದ ಮುಖ್ಯಸ್ಥೆ ಲಲಿತಾ ಶೆಟ್ಟಿ, ಸಿಬಂದಿಗಳಾದ ವಿಲ್ಮಾ , ಗುಣವತಿ, ಚಂದ್ರಶೇಖರ್ ಉಪಸ್ಥಿತರಿದ್ದರು. ಚರಣ್ ರಾಜ್ ನಿರೂಪಿಸಿದರು.
ಜಲಜೀವನ್ ಮಿಷನ್ ಆಶಯದಂತೆ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು ಈಗ ಪಂಚಾಯತ್ ತನ್ನ ಗುರಿ ಮುಟ್ಟಿದೆ.