ಧರ್ಮಸ್ಥಳ, ಆ 04 (DaijiworldNews/DB): ವಿವಾಹಿತೆಯೋರ್ವರು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.
ಮುಂಡ್ರುಪ್ಪಾಡಿ ನಿವಾಸಿ ಚೈತ್ರಾ ಅಡಿಗ ಆತ್ಮಹತ್ಯೆ ಮಾಡಿಕೊಂಡವರು. ಧರ್ಮಸ್ಥಳದ ದೀಪಕ್ ಎಂಬವರೊಂದಿಗೆ ಮೂರು ವರ್ಷದ ಹಿಂದೆ ಚೈತ್ರಾ ವಿವಾಹವಾಗಿದ್ದು, ಇವರಿಗೆ ಹೆಣ್ಣು ಮಗುವಿದೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತಹಶೀಲ್ದಾರ್ ಪೃಥ್ವಿ ಸಾನಿಕಮ್, ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.