ಕಾರ್ಕಳ, ಆ 04 (DaijiworldNews/MS): ನ್ಯಾಯಾಂಗ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅರ್ಜಿದಾರರಿಗೆ ಹೆಚ್ಚಿನ ರೀತ್ಯಾದಲ್ಲಿ ಅನುಕೂಲವಾಗುತ್ತಿದೆ. ಸರಕಾರದ ಆತುರ ನಿರ್ಧಾರದಿಂದಾಗಿ ಜನನ ಮತ್ತು ಮರಣ ನೊಂದಾಣೆ ಮಾಡುವ ಕಾರ್ಯವನ್ನು ನ್ಯಾಯಾಂಗದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಅಧಿಕಾರ ನೀಡಿರುವುದರಿಂದ ಜನಸಾಮಾನ್ಯ ಅರ್ಜಿದಾರರಿಗೆ ಅನಾನುಕೂಲಕ್ಕೆ ಕಾರಣವಾಗಲಿದೆ ಎಂದು ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಜನನ ಮತ್ತು ಮರಣ ನೊಂದಾಣೆ ಮಾಡುವ ಕಾರ್ಯವನ್ನು ನ್ಯಾಯಾಂಗದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಅಧಿಕಾರ ನೀಡಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಕಾರ್ಕಳ ವಕೀಲದ ಸಂಘದಲ್ಲಿ ಆಯೋಜಿಸಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಉಪಾಧ್ಯಕ್ಷ ದಯಾನಂದ ನಾಯ್ಕ, ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಜೊತೆ ಕಾರ್ಯದರ್ಶಿ ಸವಿತಾ ಹೆಗ್ಡೆ, ಮಾಜಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ ಮೊದಲಾದವರು ಉಪಸಿತರಿದ್ದರು.