ಮೂಡುಬಿದಿರೆ,ಜ 29 (MSP): ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ, ಕಳ್ಳರು ಲಕ್ಷಾಂತರ ಬೆಳೆಬಾಳುವ ಚಿನ್ನಾಭರಣವನ್ನು ಕಳವುಗೈದಿದ್ದಿದ್ದು, ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಪುಚ್ಚೆಮೊಗರು ನೀರಲ್ಕೆ ನಿವಾಸಿ ಸುಚಿತ್ರಾ ಎಂಬವರು ಜ.24ರಂದು ಮಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಮದುವೆಗೆ ಹೋಗಿದ್ದು, ಭಾನುವಾರ ಬಂದು ನೋಡುವಾಗ ಯಾರೋ ಕಪಾಟು ಒಡೆದು, 75ಗ್ರಾಂ, ಸುಮಾರು 2.15 ಲಕ್ಷ ರೂ. ಬೆಳೆಬಾಳುವ ಚಿನ್ನಾಭರಣವನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಸುಚಿತ್ರಾ ಅವರು ಸೋಮವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ಕಳವುಗೈದವರ ಸುಳಿವು ಸಿಕ್ಕಿದ್ದು, ತನಿಖೆ ನಡೆಸುತ್ತಿದ್ದಾರೆ.