ಸುಬ್ರಹ್ಮಣ್ಯ, ಆ 03 (DaijiworldNews/SM): ಈ ವರ್ಷ ರಾಜ್ಯದಲ್ಲಿ ಸಮಗ್ರ ವಿದ್ಯುತ್ ವ್ಯವಸ್ಥೆಯ ವ್ಯವಸ್ಥಿತತೆಗೆ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಹಸಿರು ವಿದ್ಯುತ್ ಯೋಜನೆಯಡಿಯಲ್ಲಿ 1 ಸಾವಿರ ಮೇಘವ್ಯಾಟ್ ವಿದ್ಯುತ್ ಉತ್ಪಾಧನೆ ಮಾಡಲಾಗುವುದು. ಈ ಹಿನ್ನೆಲೆ ಯಲ್ಲಿ ಹೈಬ್ರಿಡ್ ಪಾಕ್೯ ನಿರ್ಮಾಣ ಗೊಳ್ಳಲಿದೆ ಎಂದು ಇಂಧನ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.
ರಾಜ್ಯಾದ್ಯಂತ ಗುಣ ಮಟ್ಟದ ಮತ್ತು ನಿರಂತರ ವಿದ್ಯುತ್ ಒದಗಿಸಲು ರಾಜ್ಯದ ಅಲ್ಲಲ್ಲಿ ವಿದ್ಯುತ್ ಉಪವಿಭಾಗ ವನ್ನು ತೆರೆಯಲಾಗಿದೆ. ಅನೇಕ ಕಡೆ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಗೊಂಡಿದ್ದು ನಿರಂತರ ವಿದ್ಯುತ್ ಒದಗಿಸಲಾಗುತ್ತಿದೆ.
ಗುತ್ತಿಗೆ ಆಧಾರದಲ್ಲಿ ಪವರ್ ಮ್ಯಾನ್ ಗಳನ್ನು ನೇಮಕಗೊಳಿಸಲಾಗಿದೆ.ಮುಂದೆಯೂ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ ಈ ಸಂದರ್ಭ ಸ್ಥಳೀಯ ರಿಗೆ ಆಧ್ಯತೆ ನೀಡಲಾಗುವುದು ಎಂದು ಸಚಿವರು ನುಡಿದರು.