ಸುಬ್ರಹ್ಮಣ್ಯ, ಆ 03 (DaijiworldNews/SM): ನೆರೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಸುನಿಲ್ ಭೇಟಿ ಸಂದರ್ಭದಲ್ಲಿ ಜೊತೆಗಿದ್ದ ನಾಯಕರು ದ.ಕ ಜಿಲ್ಲೆ ಉಸ್ತುವಾರಿ ಸಚಿವರ ದಾರಿ ತಪ್ಪಿಸಿದ್ದು, ಇದರಿಂದಾಗಿ ರಸ್ತೆ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯೋದಕ್ಕೆ ಸಚಿವರಿಗೆ ಅಸಾಧ್ಯವಾಯಿತೆಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಗರಂ ಆಗಿದ್ದಾರೆ.
ನೆರೆಯಿಂದಾಗಿ ಮಳೆಯಾಳ ಐನಕಿದು ಹರಿಹರ ರಸ್ತೆ ಹದಗೆಟ್ಟಿತ್ತು. ಇತ್ತೀಚೆಗೆ ರಸ್ತೆಯಲ್ಲಿ ಬಸ್ಸು ಹೂತು ಪ್ರಯಾಣಕ್ಕೆ ಅಡ್ಡಿಯಾಗಿತ್ತು. ಈ ದಾರಿಯಲ್ಲಿ ಸಚಿವರು ಪ್ರಯಾಣ ಬೆಳೆಸಲು ಸ್ಥಳೀಯರು ಆಗ್ರಹಿಸಿದ್ದರು. ಮಳೆಯಾಳ ಐನಕಿದು ಹರಿಹರ ರಸ್ತೆಯಲ್ಲಿ ಸಚಿವರು ಸಂಚರಿಸಬೇಕಿತ್ತು. ಹೊಂಡ ಗುಂಡಿಯ ರಸ್ತೆಯ ದರ್ಶನ ಕಾಣಬೇಕಿದ್ದ ಸಚಿವರು ಆ ಮಾರ್ಗದಲ್ಲಿ ಸಂಚರಿಸುವ ಬದಲು ಸುತ್ತು ಬಳಸಿ ತೆರಳಿದ್ದರು. ಸುಳ್ಯ ನಡುಗಲ್ಲು ಮೂಲಕ ಸುತ್ತು ಬಳಸಿ ಸಚಿವರನ್ನು ಕರೆದೊಯ್ಯಲಾಗಿತ್ತು.
ಸ್ಥಳೀಯ ಬಿಜೆಪಿ ನಾಯಕರ ನಡೆಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಯಾಲ ಬಳಿ ಸಚಿವರ ಬೆಂಗಾವಲು ಪಡೆಗೆ ಡಿಸಿ ಗರಂ ಆಗಿದ್ದಾರೆ.