ಮಂಗಳೂರು, ಆ 03 (DaijiworldNews/MS): ನಗರದ ಮೇರಿಹಿಲ್ ಸುತ್ತಮುತ್ತದ ನಿವಾಸಿಗಳಿಗೆ ಬುಧವಾರ ಬೆಳಗ್ಗೆ 10ರಿಂದ 10.30ರ ವೇಳೆಗೆ ಭೂ ಕಂಪಿಸಿದ ಅನುಭವವಾಗಿದೆ.
ಭೂಮಿ ಕಂಪಿಸಿದ ಅನುಭವದಿಂದ ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತದ ಶಾಲೆಯ ವಿದ್ಯಾರ್ಥಿಗಳನ್ನು ಕೆಲ ಕಾಲ ಶಿಕ್ಷಕರು ತರಗತಿಯಿಂದ ಹೊರನಿಲ್ಲಿಸಿದ್ದಾರೆ. ಬಳಿಕ ಮತ್ತೆ ಎಂದಿನಂತೆ ತರಗತಿಗಳು ಆರಂಭವಾಗಿದೆ.
ವಿದ್ಯಾರ್ಥಿಗಳ ಹೆತ್ತವರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಸುತ್ತಮುತ್ತಲಿನ ಒಂದಷ್ಟು ಬಹುಮಹಡಿಯ ಕಟ್ಟಡಗಳಲ್ಲೂ ಲಘು ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ಮೇರಿಹಿಲ್ ನಲ್ಲಿ ಭೂಕಂಪಿಸಿದೆಯೇ ಅಥವಾ ಇನ್ಯಾವುದೋ ಕಾರಣದಿಂದ ಜನಕ್ಕೆ ಈ ರೀತಿಯ ಅನುಭವವಾಗಿದೆಯೋ ಎನ್ನುವುದು ಇನ್ನಷ್ಟೇ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಗಡಿಭಾಗ ಸುಳ್ಯ ಹಾಗೂ ಕೊಡಗು ಗಡಿ ಪ್ರದೇಶದಲ್ಲಿ ಕಳೆದ ತಿಂಗಳು ಹಲವಾರು ಭಾರಿ ಕಂಪನ ಉಂಟಾಗಿತ್ತು