ಸುಬ್ರಹ್ಮಣ್ಯ, ಆ 02 (DaijiworldNews/DB): ಸುಬ್ರಹ್ಮಣ್ಯ ಸಮೀಪದ ಯೇನೆಕಲ್ಲು ಗ್ರಾಮದ ಶ್ರೀ ಶಂಕಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಳದ ಬಳಿಯ ಬಚ್ಚನಾಯಕನ ದೈವಸ್ಥಾನದ ಬಳಿ ಮೊಸಳೆಯೊಂದು ದಡಕ್ಕೆ ಬಂದಿದ್ದು, ಬಳಿಕ ಮತ್ತೆ ನದಿಗೆ ತೆರಳಿದೆ.
ಸೋಮವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ನದಿ ತುಂಬಿ ಹರಿದಿದೆ. ಈ ವೇಳೆಯೇ ಮೊಸಳೆ ದಡಕ್ಕೆ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮೊಸಳೆ ದಡಕ್ಕೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಆಸುಪಾಸಿನವರು ನದಿ ಬಳಿ ಬಂದು ಮೊಸಳೆಯನ್ನು ನೋಡುತ್ತಿದ್ದರು. ಜನ ಸೇರುತ್ತಿದ್ದುದನ್ನು ಕಂಡು ಮೊಸಳೆ ಸೀದಾ ನದಿ ಕಡೆಗೆ ತೆರಳಿದೆ.
ಈ ದೃಶ್ಯವನ್ನು ಸ್ಥಳೀಯರಾದ ಮನುದೇವ ಪರಮಲೆ ಅವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.