ಉಡುಪಿ, ಆ 02 (DaijiworldNews/HR): ಪರ್ಕಳ ಇಲ್ಲಿನ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಪಕ್ಕದಲ್ಲಿ ಬೃಹತ್ ಗಾತ್ರದ ನೀರಿನ ಟಾಂಕಿ ಯೊಂದು ಪಕ್ಕದಲ್ಲಿರುವ ಪರ್ಕಳ ಎಜುಕೇಶನ್ ಸೊಸೈಟಿಯ ಜಾಗದೊಳಗೆ ಧರೆಗುಳಿದು ಮಗುಚಿ ಬಿದ್ದಿದೆ.
ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ ಹಳೆಯದಾದ ನೀರಿನ ಟ್ಯಾಂಕಿ ಬಿದ್ದಿದೆ ಇದಾಗಿದ್ದು ಶಿಥಿಲಾವಸ್ಥೆಯಲ್ಲಿತ್ತು. ಪಕ್ಕದಲ್ಲಿ 80ನೇ ಬಡಗಬೆಟ್ಟಿಗೆ ಸಂಚರಿಸುವ ರಸ್ತೆ ಜನನಿ ಬಿಡ ಪ್ರದೇಶವಾಗಿದ್ದು, ಮಾತ್ರವಲ್ಲದೇ ಪರ್ಕಳ ಎಜುಕೇಶನ್ ಸೊಸೈಟಿಯ ಈ ಜಾಗದಲ್ಲಿ ಹಿಂದೆ ಅಂಗನವಾಡಿಯು ಕೂಡ ಇಲ್ಲಿ ಕಾರ್ಯಾಚರಿಸುತಿತ್ತು ಆದರೆ ಇದೀಗ ಇದು ನಿರ್ಜನ ಪ್ರದೇಶ ಆಗಿರುವುದರಿಂದ ಅನಾಹುತ ತಪ್ಪಿದೆ.
ಇನ್ನು ನಗರಸಭೆಯ ವ್ಯಾಪ್ತಿಯಲ್ಲಿ ಇಂತಹ ನಿರುಪಯುಕ್ತ ನೀರಿನ ಟ್ಯಾಂಕಿ ಇದ್ದಲ್ಲಿ ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಬೇಕು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ರಾಜೇಶ್ ಪ್ರಭು ಪರ್ಕಳ, ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವರ್ಗದವರನ್ನು ಒತ್ತಾಯಿಸಿದ್ದಾರೆ.