ಮಂಗಳೂರು, ಆ 01(DaijiworldNews/SM): ಸುರತ್ಕಲ್ ನಲ್ಲಿ ದಷ್ಕರ್ಮಿಗಳಿಂದ ಇತ್ತಿಚೀಗೆ ಬರ್ಬರವಾಗಿ ಹತ್ಯೆಗೀಡಾದ ಪಾಝೀಲ್ ಮನೆಗೆ ರಾಜ್ಯದ ಮಾಜಿ ಸಿಎಂ ಹೆಚ್ ಡಿ ಕೆ ಕುಮಾರಸ್ವಾಮೀ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭ ಪಾಝೀಲ್ ಕುಟುಂಬಕ್ಕೆ 5 ಲಕ್ಷ ರೂ ಚೆಕ್ ವಿತರಿಸಿದರು. ಈ ವೇಳೆ ಚೆಕ್ಕನ್ನು ಪಡೆಯಲು ಮೊದಲು ನಿರಾಕರಿಸಿದ ಪಾಝೀಲ್ ಕುಟುಂಬ ಬಳಿಕ ಒತ್ತಾಯದ ಮೇರೆಗೆ ಪಾಝೀಲ್ ತಂದೆ ಚೆಕ್ಕನ್ನು ಸ್ವೀಕರಿಸಿದರು. ಇದೇ ವೇಳೆ ಕುಮಾರಸ್ವಾಮಿ ಅವರು ಎಡಿಜಿಪಿ ಅಲೋಕ್ ಕುಮಾರ್ ಗೆ ದೂರವಾಣಿ ಮೂಲಕ ಸಂಪರ್ಕಿಸಿ ನನಗೆ ಸರಕರಾದ ಮೇಲೆ ಭರವಸೆಯಿಲ್ಲ ಆದಷ್ಟು ಬೇಗ ಕೊಲೆಗಡುಕರನ್ನು ಬಂಧಿಸಿ ಶಿಕ್ಷೆ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊಲೆಗಡುಕರಿಗೆ ತಕ್ಕ ಶಿಕ್ಷೆ ಆಗಬೇಕು. ಇದಕ್ಕೆ ಬೇಕಾದ ಕಾನೂನು ಹೋರಾಟದಲ್ಲಿ ಪಕ್ಷ ಕುಟುಂಬದ ಜತೆ ನಿಲ್ಲಲಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಹ ಪೈಶಾಚಿಕ ಕೃತ್ಯಕ್ಕೆ ತಡೆ ನೀಡುತ್ತೇವೆ. ಇಂದಿನ ಪರಿಸ್ದಿತಿಯಲ್ಲಿ ಯುವಕರು ಸ್ವ ಬುದ್ಧಿಯಿಂದ ಜೀವನ ನಡೆಸಬೇಕು. ಪ್ರವೀಣ್, ಪಾಝೀಲ್, ಮಸೂದ್ ಈ ಮೂವರು ಅಮಾಯಕರು ಎಂಬುದು ತಿಳಿದಿದೆ ಇದಕ್ಕೆ ಸೂಕ್ತ ನ್ಯಾಯ ಒದಗಿಸಲು ಕುಟುಂಬದ ಜತೆ ಇರುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದೇನೆ ಎಂದರು.