ಕಾಸರಗೋಡು, ಆ 01 (DaijiworldNews/HR): ಲಕ್ಷಾಂತರ ರೂ. ಆನ್ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜೀರಿಯಾ ಪ್ರಜೆಯೋರ್ವನನ್ನು ಕಾಸರಗೋಡು ಪೊಲೀಸರು ಬೆಂಗಳೂರಿನಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾದ ಆಂಟನಿ ಒಗ್ನರಾಬೊ ಎಫಿದಾರೆ ಬಂಧಿತ.
ಸುಮಾರು 43. 0 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ವಿಶೇಷ ಪೊಲೀಸ್ ತಂಡ ಬೆಂಗಳೂರು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯಿಂದ ಲ್ಯಾಪ್ ಟಾಪ್ ಎಕ್ಸ್ ಟ್ರರ್ನಲ್ ಹಾರ್ಡ್ ಡಿಸ್ಕ್, ಫೆನ್ ಡ್ರೈವ್, ನಾಲ್ಕು ಮೊಬೈಲ್ ಫೋನ್, ವಿವಿಧ ಬ್ಯಾಂಕ್ಗಳ ಏಳು ಎಟಿಎಂ ಕಾರ್ಡ್ಗಳು, ವಿವಿಧ ದೇಶಗಳ ಮೂರು ಪಾಸ್ ಪೋರ್ಟ್ಗಳು, ಡಾಲರ್ನ ಫೋಟೋ ಕಾಫಿಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ , ಪಾಸ್ ಪೋರ್ಟ್ನ ಪ್ರತಿಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಂಡದಲ್ಲಿ ಸಬ್ ಇನ್ಸ್ ಪೆಕ್ಟರ್ ಮಧುಸೂದನನ್ ಪಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಕೆವಿ ಜೋಸೆಫ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಬಿಜೋಶ್ ವರ್ಗೀಸ್, ಶಾಜು. ಕೆ ಮತ್ತು ಅನಿಲ್ ಕೆ.ಟಿ. ಮೊದಲಾದವರಿದ್ದರು.