ಬಜ್ಪೆ, ಆ 01 (DaijiworldNews/HR): ಮಳಲಿಪೇಟೆ ಮಸೀದಿ ಪ್ರಕರಣದ ನ್ಯಾಯಾಧೀಶರು ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಆಗಸ್ಟ್ 10ಕ್ಕೆ ಮುಂದೂಡಿ ಮಾಡಿ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಆದೇಶಿಸಿದೆ.
ಮಳಲಿ ಮಸೀದಿಗೆ ಸಂಬಂಧಿಸಿದ ವಾದ-ಪ್ರತಿವಾದಗಳನ್ನು ಮೂರನೇ ಸಿವಿ ನ್ಯಾಯಾಲಯವು ಆಲಿಸಿ ತೀರ್ಪು ನೀಡುವ ಹಂತದಲ್ಲಿದ್ದಾಗ ಸ್ಥಳೀಯರಾದ ಮನೋಜ್ ಕುಮಾರ್ ಧನಂಜಯ ಮತ್ತಿತರರು ಮಳಲಿ ಮಸೀದಿ ಸಂಬಂಧಿತ ತೀರ್ಪು ಪ್ರಕಟಿಸದಂತೆ ತಡೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇನ್ನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್, ಉಚ್ಚ ನ್ಯಾಯಾಲಯ ಆದೇಶ ನೀಡುವವರೆಗೆ ಕೆಳಗಿನ ನ್ಯಾಯಾಲಯಗಳು ತೀರ್ಪು ಪ್ರಕಟಿಸಿದಂತೆ ಆದೇಶಿಸಿದ್ದು, ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಸಿವಿಲ್ ನ್ಯಾಯಾಲಯವು ಇಂದು ತೀರ್ಪು ನೀಡುತ್ತಿದ್ದು, ಆದರೆ ನ್ಯಾಯಾಧೀಶರ ವರ್ಗಾವಣೆ ಯಿಂದಾಗಿ ಪ್ರಕರಣದ ತನಿಖೆಯನ್ನು ಆ.10ಕ್ಕೆ ಮುಂದೂಡಿದೆ.