ಮಂಗಳೂರು, ಆ 01(DaijiworldNews/MS): ಕರಾವಳಿಯಲ್ಲಿ ಮುಂದಿನ 4-5 ದಿನಗಳವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಆ.2 ರಿಂದ ಮುಂದಿನ 4-5 ದಿನಗಳವರೆಗೆ ಕರ್ನಾಟಕ ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದ ಭಾಗದಲ್ಲಿ ಗುಡುಗು ಸಿಡಿಲು , ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಳೆ ಕ್ಷೀಣಿಸಿತ್ತು. ಆದರೆ ಏಕಾಏಕಿ ಶನಿವಾರ ಬೆಳೆಗ್ಗೆ ಮಳೆ ಸುರಿದು ಅವಾಂತರವನ್ನೇ ಸೃಷ್ಟಿಸಿತ್ತು.