ಬೆಳ್ಳಾರೆ, ಜು 31(DaijiworldNews/SM): ಇತ್ತೀಚಿಗಷ್ಟೇ ನೆಟ್ಟಾರು ಪ್ರವೀಣ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸಿದ್ದರು. ಈ ನೋವಿನಲ್ಲಿ ಕುಟುಂಬವಿದ್ದು, ಅದರ ನಡುವೆಯೂ ಪ್ರವೀಣ್ ಪತ್ನಿಯವರ ಹೃದಯ ಮಿಡಿದಿದೆ.
ನೆಟ್ಟಾರ್ ಪ್ರಾಥಮಿಕ ಆರೋಗ್ಯ ಕೇಂದ್ರ ಸರಿಪಡಿಸಿ ಎಂದು ಅವರು ಆಗ್ರಹಿಸಿದ್ದಾರೆ. ತುಂಬಾ ಜನರಿಗೆ ಇದರಿಂದ ಉಪಕಾರ ಆಗುತ್ತದೆ. ರಾತ್ರಿ ಹೊತ್ತು ವೈದ್ಯರೇ ಇರೋದಿಲ್ಲ ಇದರಿಂದಾಗಿ ಈ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗಿದೆ. ನನ್ನ ಗಂಡನಿಗೆ ಪ್ರಾಥಮಿಕ ಚಿಕಿತ್ಸೆ ಕೊಡುತ್ತಿದ್ದರೆ ಬದುಕಿಸಬಹುದಿತ್ತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ನನ್ನ ಗಂಡ ತೀರಿದ್ದಾರೆ, ಆದರೆ ಇನ್ನು ಬಾಕಿಯವರಿಗೆ ಸಹಾಯ ಆಗಲಿ. ಉಳಿದವರಿಗೂ ಈ ದುಸ್ಥಿತಿ ಎದುರಾಗುವುದು ಬೇಡ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಪ್ರವೀಣ್ ಪತ್ನಿ ನೂತನಾ ಮನವಿ ಮಾಡಿದ್ದಾರೆ.