ಮಂಗಳೂರು, ಜು 31(DaijiworldNews/HR): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಹಂತಕರು ಪ್ರವೀಣ್ ಅಂಗಡಿಯ 500 ಮೀಟರ್ ದೂರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದು, ಅಲ್ಲಿಂದಲೇ ಪ್ರವೀಣ್ ಚಲನವಲನಗಳನ್ನು ಸಂಪೂರ್ಣವಾಗಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಪ್ರವೀಣ್ ಹತ್ಯೆಯಂದು ಆತನ ಅಂಗಡಿ ಸಮೀಪದಲ್ಲಿನ 500 ಮೀಟರ್ ವ್ಯಾಪ್ತಿಯಲ್ಲಿ ಪವರ್ ಕಟ್ ಮಾಡಿಸಿದ್ದು, ನಂತರ ಪ್ರವೀಣ್ ಅಂಗಡಿ ಬಳಿ ತೆರಳಿ ಮರ್ಡರ್ ಮಾಡಿದ್ದಾರೆ. ಹಾಗಾಗಿ ಯಾವ ಸಿಸಿಟಿವಿ ಕ್ಯಾಮೆರಾದಲ್ಲೂ ಆರೋಪಿಗಳ ಚಹರೆ ಸಿಕ್ಕಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
ಪ್ರವೀಣ್ ಅಂಗಡಿಯಿಂದ 300 ಮೀಟರ್ ಸಮೀಪದಲ್ಲಿಯೇ ಬೆಳ್ಳಾರೆ ಪೊಲೀಸ್ ಠಾಣೆಯಿದ್ದರೂ, ಯಾವುದೇ ಅನುಮಾನ ಬಾರದಂತೆ ಅದರ ಸಮೀಪದಲ್ಲಿಯೇ ಇದ್ದಂತ ಹಂತಕರು, ಪ್ರವೀಣ್ ನೆಟ್ಟಾರು ಹತ್ಯೆಗೈದಿದ್ದಾರೆ.
ಬಂಧಿತ ಜಾಫರ್ ಮತ್ತು ಶಫಿ ಇಬ್ಬರು ಆರೋಪಿಗಳನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.