ವಿಟ್ಲ,ಜ 28 (MSP): ಅಕ್ರಮ ಜಾನುವಾರು ಸಾಗಣೆ ಮಾಡುವ ವೇಳೆ ಕಡಂಬುವಿನಲ್ಲಿ ನಡೆದ ಇತ್ತಂಡಗಳ ನಡುವಿನ ಮಾರಾಮಾರಿಗೆ ಸಂಬಂಧಿಸಿದಂತೆ, ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಬಂಧನ ಮಾಡಿ ವಿಟ್ಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೊದಲನೇ ಸಾಲು-ಇಕ್ಬಾಲ್,ಅನ್ಸಾರ್,ಉಮ್ಮರ್ ಫಾರೂಕ್,ಅಶ್ರಫ್,ಅಬ್ದುಲ್ ಅಝೀಜ್
ಎರಡನೆಯ ಸಾಲು- ಇಸ್ಮಾಯಿಲ್,ಧನಂಜಯ,ಅಬ್ದುಲ್ ಮಜೀದ್,ಯತೀಶ್ ಶೆಟ್ಟಿ, ಜಯ ಕೊಟ್ಟಾರಿ
ಕಡಂಬು ನಿವಾಸಿ ಪಿಎಫ್ಐ ಮುಖಂಡ ಅಬ್ದುಲ್ ಅಝೀಜ್ (34), ರಾದುಕಟ್ಟೆ ನಿವಾಸಿ ಬಜರಂಗದಳ ಮುಖಂಡ ಜಯಕೊಟ್ಟಾರಿ (33), ಬಾಳುಗೋಡು ನಿವಾಸಿ ಧನಂಜಯ (30), ಕಾಪುಕೋಡಿ ನಿವಾಸಿ ಯತೀಶ್ ಶೆಟ್ಟಿ (26), ಕಡಂಬು ನಿವಾಸಿಗಳಾದ ಅಬ್ದುಲ್ ಮಜೀದ್, ಅಶ್ರಫ್, ಉಮ್ಮರ್ ಫಾರೂಕ್, ಇಸ್ಮಾಯಿಲ್, ಅನ್ಸಾರ್ (23), ಇಕ್ಬಾಲ್(24) ಬಂಧಿತ ಆರೋಪಿಗಳು.
ಅಬ್ದುಲ್ ಅಝೀಜ್ ಹಾಗೂ ಜಯಕೊಟ್ಟಾರಿ ಅವರ ಮೇಲೆ ವಿಟ್ಲ ಠಾಣೆಯಲ್ಲಿ ಈ ಹಿಂದೆ ಪ್ರಕರಣಗಳು ದಾಖಲಾಗಿತ್ತು. ಇದೀಗ ಹಲ್ಲೆ, ಜಾನುವಾರು ಅಕ್ರಮ ವಧೆ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಕಡಂಬಲ್ಲಿ ಶುಕ್ರವಾರ ತಡರಾತ್ರಿ ಮನೆಯೊಂದರ ಹೊರಗಡೆ ಎರಡು ಎಮ್ಮೆ ಕಟ್ಟಿ ಹಾಕಿದ ಪ್ರಕರಣ ನಡೆದಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ತೆರಳಿದ್ದರು. ಬಳಿಕ ಪೊಲೀಸರು ಅಲ್ಲಿಗೆ ಬಂದಿದ್ದರು. ಈ ಸಂದರ್ಭ ಎರಡು ತಂಡಗಳ ಜನರು ಜಮಾಯಿಸಿ, ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿತ್ತು. ಬಳಿಕ ವಿಟ್ಲ ಪೊಲೀಸರು ಸ್ವಯಂ ಪ್ರೇರಿತವಾಗಿ 40 ಕ್ಕಿಂತಲೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಬಂಟ್ವಾಳ ಎಎಸ್ ಪಿ ಸೈದುಲ್ಲ ಅಡವಾತ್ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್ ಮಾರ್ಗದರ್ಶನದಲ್ಲಿ ವಿಟ್ಲ ಎಸೈ ಯಲ್ಲಪ್ಪ, ಹರೀಶ್, ಸಿಬ್ಬಂದಿ ಮಂಜುನಾಥ್, ರಕ್ಷಿತ್, ಪ್ರತಾಪ್, ಅಶೋಕ್, ಹೇಮರಾಜ್, ಹಾಲೇಶ್ ಅವರ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.